January 11, 2026

ಮಾತೃ ಭಾಷೆ ಕನ್ನಡದ ಬಗ್ಗೆ ಕೀಳರಿಮೆ ಬೇಡಾ – ವಾಣಿ ಭಂಡಾರಿ

ಮಾತೃ ಭಾಷೆ ಕನ್ನಡದ ಬಗ್ಗೆ ಕೀಳರಿಮೆ ಬೇಡಾ – ವಾಣಿ ಭಂಡಾರಿ

ರಿಪ್ಪನ್‌ಪೇಟೆ;-ಪಾಶ್ವಿಮಾತ್ಯ  ಭಾಷೆಯ ಬಳಕೆಯಿಂದಾಗಿ ನಮ್ಮ ಮಾತೃಭಾಷೆ ಬಗ್ಗೆ ಕೀಳು ಭಾವನೆಯಲ್ಲಿಕಾಣುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ನಮ್ಮ ಮನೆಯಲ್ಲಿ ಮೊದಲ ಭಾಷೆಯಾಗಿಕನ್ನಡವೇಅಗಿದೆ ಮಗು ಅಮ್ಮಎಂದುಕರೆಯುವುದರಿಂದ ಆರಂಭವಾಗುವ ಭಾಷೆಯೆಕನ್ನಡಆದನ್ನು ಉಳಿಸಿ ಬೆಳಸುವ ಮೂಲಕ ಮಾತೃಭಾಷೆಯನ್ನು ಪ್ರೋತ್ಸಾಹಿಸುವಂತಾಗ ಬೇಕು ಎಂದು ಶಿವಮೊಗ್ಗ ಉಪನ್ಯಾಸಕಿ ವಾಣಿ ಭಂಡಾರಿ ಹೇಳಿದರು.

ಇಲ್ಲಿನಕಲಾಕೌಸ್ತುಭಕನ್ನಡ ಸಂಘದ ವಾರ್ಷೀಕೋತ್ಸವ ಮತ್ತು ೬೯ ನೇ ಕನ್ನಡರಾಜ್ಯೋತ್ಸವಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿಉಪನ್ಯಾಸ ನೀಡಿ ಮಾತನಾಡಿ ಕನ್ನಡ ನವಂಬರ್ ತಿಂಗಳಿಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದರು.

ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನುಕಲಾಕೌಸ್ತುಭಕನ್ನಡ ಸಂಘದಅಧ್ಯಕ್ಷ ರವೀಂದ್ರಕೆರೆಹಳ್ಳಿ ವಹಿಸಿದ್ದರು.
ಮುಖ್ಯ ಆತಿಥಿಗಳಾಗಿ ಸಿದ್ದಿವಿನಾಯಕ ಸೇವಾ ಸಮಿತಿಯಅಧ್ಯಕ್ಷಎನ್.ಸತೀಶ್,ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ಬಿ.ಮಂಜುನಾಥ,ಸಿದ್ದಿವಿನಾಯಕದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ, ಕ.ಸಾ.ಪ ಆಧ್ಯಕ್ಷನರಸಿಂಹ,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಪಿ.ಎಸ್.ಐ.ಪ್ರವೀಣ್‌ಕುಮಾರ್, ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕ ರವಿಕುಮಾರ್ ಎಸ್ ಈಚಲಕೊಪ್ಪ, ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಯಾದರಾಮಕೃಷ್ಣ ವಿದ್ಯಾಲಯದ ಕ್ರೀಡಾಪಟುಗಳನ್ನು   ಸನ್ಮಾನಿಸಿಲಾಯಿತು.

ನಾಗರತ್ನ ದೇವರಾಜ್ ಸ್ವಾಗತಿಸಿದರು.ಸುರೇಶಸಿಂಗ್ ಪ್ರಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.ಲೀಲಾಉಮಾಶಂಕರ್ ವಂದಿಸಿದರು.

ರವಿ ಮೂರೂರುತಂಡದವರಿಂದ ಸಂಗೀತ ರಸಮಂಜರಿಕಾರ್ಯಕ್ರಮ ಹಾಗೂ ಮನು ಹಂದಾಡಿ ಮತ್ತುತಂಡದವರಿಂದ ನಗೆ-ಸುಗ್ಗಿ ಹಾಸ್ಯ ಕಾರ್ಯಕ್ರಮ ಜನಾಕರ್ಷಣೆಗೊಂಡಿತು.

About The Author

Leave a Reply

Your email address will not be published. Required fields are marked *

Exit mobile version