ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯ ಎರಡೂ ಕೈಗಳು ಛಿದ್ರ..ಛಿದ್ರ
ಹೇರ್ ಡ್ರೈಯರ್ ಮೆಷಿನ್ ಸ್ಪೋಟಗೊಂಡು ಮಹಿಳೆಯೊಬ್ಬರ ಎರಡು ಕೈಗಳು ಛಿದ್ರ..ಛಿದ್ರಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬಾಗಲಕೋಟೆ ಇಳಕಲ್ಲದ ಬಸವನಗರದಲ್ಲಿ ನಡೆದಿದೆ.
ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಗಾಯಗೊಂಡವರು.
ಸ್ನೇಹಿತೆಗೆ ಬಂದಿದ್ದ ಪಾರ್ಸಲ್ ನ್ನು ತೆರೆದು ಅದರಲ್ಲಿದ್ದ ಹೇರ್ ಡ್ರೈಯರ್ ಆನ್ ಮಾಡಿದಾಗ ತಕ್ಷಣ ಸ್ಫೋಟಗೊಂಡು ಈಗ ಆಸ್ಪತ್ರೆಗೆ ಸೇರಿದ್ದಾರೆ.
ನಡೆದಿದ್ದೇನು.!?
ಶಶಿಕಲಾ ಎಂಬುವರ ಮನೆಗೆ ಹೇರ್ ಡ್ರೈಯರ್ ಕೊರಿಯರ್ ಮೂಲಕ ಬಂದಿತ್ತು. ಪಾರ್ಸಲ್ ಮೇಲೆ ಶಶಿಕಲಾ ಅವರ ಮೊಬೈಲ್ ನಂಬರ್ ಇದ್ದ ಹಿನ್ನೆಲೆಯಲ್ಲಿ ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, ‘ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಕಲೆಕ್ಟ್ ಮಾಡಿ’ ಎಂದಿದ್ದಾನೆ. ಈ ವೇಳೆ ಶಶಿಕಲಾ ‘ನಾನು ಬೇರೆ ಊರಿನಲ್ಲಿದ್ದೇನೆ. ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ ‘ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊ’ ಎಂದು ಹೇಳಿದ್ದಾರೆ.
ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್ ಪಡೆದಿದ್ದಾರೆ. ಪಾರ್ಸಲ್ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಆನ್ ಮಾಡಿದ್ದಾರೆ. ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಸ್ಫೋಟಗೊಂಡಿದೆ.ಹೇರ್ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ.
ಕೂಡಲೇ ಬಸಮ್ಮ ಅವರನ್ನು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಶಿಕಲಾ ಅವರು ಹೇಳುವ ಪ್ರಕಾರ, ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲವಂತೆ. ಆದರೆ, ಅವರ ಹೆಸರಲ್ಲಿ ಹೇರ್ ಡ್ರೈಯರ್ ಪಾರ್ಸಲ್ ಹೇಗೆ ಬಂತು? ಹಣ ನೀಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಾಗಿದೆ.
ಈದ್ ಮಿಲಾದ್ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ, ಡಿಜೆ, ಸಿಡಿಮದ್ದು ನಿಷೇಧ - ಡಿಸಿ ಆದೇಶ Shivamogga district…
ದೀರ್ಘಕಾಲದಿಂದ ಗೈರುಹಾಜರಾಗಿದ್ದ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಜಾಗೃತಿ ಅಭಿಯಾನ Awareness campaign conducted by Government High School,…
ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು Gold mangalsutra…
ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ , ಗರ್ಭಿಣಿ! ಆರೋಪಿಯ ಬಂಧನ A 16-year-old minor…
ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…
ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…