ರಿಪ್ಪನ್‌ಪೇಟೆ;-ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸೇವಾ ಸಮಿತಿಯ 57 ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವಕ್ಕೆ ಇಂದು ಸಂಜೆ 5.30ಕ್ಕೆ ಅರಂಭಗೊಂಡಿತು.
ಯುವಕರ ಮಹಿಳೆಯರು ಪುಟಾಣಿ ಮಕ್ಕಳ ವಾದ್ಯಕ್ಕೆ ತಕ್ಕ ಕುಣಿತದೊಂದಿಗೆ ಚಾಲನೆ ರಾಜಬೀದಿ ಉತ್ಸವದಲ್ಲಿ ವಿವಿಧ ಹೆಸರಾಂತ ಜಾನಪದ ಕಲಾತಂಡಗಳಾದ ಡೊಳ್ಳೂ ಕುಣಿತ ತಮಟೆಬಡಿತ.ಕೀಲುಕುದುರೆ ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರಿಂದ ವಿವಿಧ ಭಂಗಿಯ ಪ್ರದರ್ಶನದೊಂದಿಗೆ ಘೋಷಣೆಗಳು ಮುಗಿಲು ಮುಟ್ಟಿವೆ.
ಗಣಪತಿಯ ರಾಜಬೀದಿ ಉತ್ಸವ ತಿಲಕ್ ಮಂಟಪದಿಂದ ಹೊರಟು ಶಿವಮೊಗ್ಗ ರಸ್ತೆ ಮಾರ್ಗ ಸಾಗುವ ರಸ್ತೆಯಲ್ಲಿ ತಳಿರು ತೋರಣ ರಂಗೋಲಿಯೊಂದಿಗೆ ಗಣೇಶ ಉತ್ಸವಕ್ಕೆ ಸ್ವಾಗತಿಸುತ್ತಿರುವುದು ಮತ್ತು ಕಲಾತಂಡಗಳ ವೃತ್ಯವನ್ನು ಅಪಾರ ಸಂಖ್ಯೆಯ ಭಕ್ತ ಸಮೂಹ ವೀಕ್ಷಿಸಲು ಕಾತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತು.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಬಳೆಗಾರ್,ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಅರ್.ಈ.ಈಶ್ವರಶೆಟ್ಟಿ,ಪ್ರಧಾನಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ,ಎಂ.ಬಿ.ಮಂಜುನಾಥ,.ಸುರೇಶ್‌ಸಿಂಗ್,ಸುದೀಂದ್ರಪೂಜಾರಿ,ತೀರ್ಥೇಶ್‌ಅಡಿಕಟ್ಟು,ರವೀಂದ್ರಕೆರೆಹಳ್ಳಿ,ಆರ್.ರಾಘವೆಂದ್ರ,ಶ್ರೀನಿವಾಸ್ ಅಚಾರ್, ಎನ್.ಸತೀಶ್, ಗಣೇಶ್ಎನ್.ಕಾಮತ್, ಆರ್.ಹೆಚ್.ಶ್ರೀನಿವಾಸ ಅಚಾರ್, ಅಟೋ ಲಕ್ಷಣ, ಎಂ.ಡಿ.ಇಂದ್ರಮ್ಮ, ಜಯಲಕ್ಷಿö್ಮಮೋಹನ್, ಅರ್.ಡಿ.ಶೀಲ,ಅರ್.ಶೈಲಪ್ರಭು, ಹೆಚ್.ಎನ್.ಚೋಳರಾಜ್, ಡಿ.ಈ.ರವಿಭೂಷಣ,ಎಸ್.ದಾನಪ್ಪ,ನಾಗರಾಜ್ ಪವಾರ್,ತುಳೋಜಿರಾವ್,ಮುರುಳಿ, ಕೆ.ವಿ.ಲಿಂಗಪ್ಪ,ಶ್ರೀಧರ್ bsnl, ಭಾಸ್ಕರ್ ಶೆಟ್ಟಿ, ಭೀಮರಾಜ್,ವಾಸುಶೆಟ್ಟಿ, ಕೆ.ಎ.ನಾರಾಯಣ,ಶಾಂತಕುಮಾರ,
ಯೋಗೇಶ್,ಪುಟ್ಟರಾಜ್ ಸ್ವಾಮಿ ದೊಡ್ಡಿನಕೊಪ್ಪ, ಹೆಚ್.ಎನ್.ಉಮೇಶ್,ದೇವರಾಜ್ ಪವಾರ್,ಇನ್ನಿತರ ಹಲವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ತೀರ್ಥಹಳ್ಳಿ ಡಿವೈಎಸ್‌ಪಿ.ಗಜಾನನ ವಾಮನ ಸುತಾರ,ವೃತ್ತನಿರೀಕ್ಷಕ ಗುರಣ್ಣ ಹೆಬ್ಬಾಳ್,ಪಿಎಸ್‌ಐ ಪ್ರವೀಣ್ ಎಸ್ ಪಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿವರ್ಗ ಗ್ರಾಮ ಪಂಚಾಯ್ತಿ ಪಿಡಿಓ ಸಿಬ್ಬಂದಿವರ್ಗ ಇನ್ನಿತರ ಇಲಾಖೆಯ ಅಧಿಕಾರಿಗಳು ಗಣಪತಿ ಮೆರವಣಿಗೆ ಹಿನ್ನಲೇಯಲ್ಲಿ ಪೊಲೀಸ್ ಇಲಾಖೆ ಗೃಹ ರಕ್ಷಕ ದಳ ಪಟ್ಟಣದ ಎಲ್ಲೇಡೆ ಬಿಗಿ ಬಂದೋಬಸ್ತುನೊಂದಿಗೆ ಸಿಸಿಟಿವಿ ಡ್ರೋಣ್ ಕ್ಯಾಮರಗಳಲ್ಲಿ ಹಾಗೂ ಮೆರವಣಿಗೆ ಪ್ರತಿ ಹಂತದಲ್ಲಿ ಸೂಕ್ತ ಪರಿಶೀಲನೆ ನಡೆಸುತ್ತಿರುವುದು ಕಂಡುಬಂತು.
ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…
ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…
ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…
ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…
ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…