January 11, 2026

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಸರ್ಕಾರಿ ಶಾಲೆಯ ಹಿಂಭಾಗದ ತುಂಗಾನದಿಯಲ್ಲಿ ಅಪರಿಚಿತ ಶವ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಸಮೀಪದ ಕುಟ್ರ ನಿವಾಸಿ ಕೃಷ್ಣಮೂರ್ತಿ ಎಂದು ತಿಳಿದುಬಂದಿದೆ.

ಗುಡ್ಡೆಕೊಪ್ಪ ನಿವಾಸಿ 14-07-2024 ರಂದು ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಮೃತದೇಹದ ಸೊಂಟದಲ್ಲಿ ಸೇಫ಼್ಟಿ ಪಿನ್ ಆಧಾರದ ಮೇಲೆ ಕುಟುಂಬಸ್ಥರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

ಮೃತದೇಹವು ಪ್ರಮಾಣದಲ್ಲಿ ಕೊಳೆತಿದ್ದು ಮುಖ, ದೇಹವನ್ನು ಗುರುತಿಸಲು ಸಾಧ್ಯವಾಗದ ಹಂತಕ್ಕೆ ತಲುಪಿತ್ತು ನಾಪತ್ತೆಯಾದ ದಿನವೇ ನದಿಗೆ ಸಾವನ್ನಪ್ಪಿ ತೂದೂರಿನವರೆಗೂ ತೇಲಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Exit mobile version