POSTMANNEWS

ನೈಜ ಸುದ್ದಿ ನೇರ ಬಿತ್ತರ..

ಕಾಲೇಜು ಹಿಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರು ಯುವಕರು ಅರೆಸ್ಟ್

ಕಾಲೇಜು ಹಿಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ – ಇಬ್ಬರು ಅರೆಸ್ಟ್

ಪಿಯು ಕಾಲೇಜಿನ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ 350 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಆಯನೂರು ಗ್ರಾಮದ ಪಿಯು ಕಾಲೇಜ್ ಕಾಂಪೌಂಡ್ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಬಂಧಿತರಿಂದ ಸುಮಾರು 12500 ರೂಪಾಯಿ ಮೌಲ್ಯದ 350 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.

ಅರೋಪಿಗಳಾದ ವಿಷ್ಣು ಪಿ ತಂದೆ ಪರಶುರಾಮ್ 26 ವರ್ಷ ವಾಸ  ಶಾಂತಿನಗರ ಹಾರ್ನಳ್ಳಿ ಗ್ರಾಮ ಶಿವಮೊಗ್ಗ ತಾಲೂಕು , ಸುನಿಲ್ ನಾಯಕ ತಂದೆ ರಾಮ ನಾಯಕ 30 ವರ್ಷ ವಾಸ ನಾರಾಯಣಪುರ ಗ್ರಾಮ  ಶಿವಮೊಗ್ಗ ತಾಲ್ಲೂಕು ಇವರನ್ನು ಬಂಧಿಸಲಾಗಿದೆ

ಕಾರ್ಯಾಚರಣೆಯಲ್ಲಿ ಡಿವೈ ಎಸ್ಪಿ ಸುರೇಶ್ ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್, ಶಾಂತರಾಜ್ ಪಿಎಸ್ಐ. ತೊಳಚ್ಚ ನಾಯಕ್ ಪಿಎಸ್ಐ ಸಿಬ್ಬಂದಿಗಳಾದ ಹಾಲಪ್ಪ. ಪ್ರಕಾಶ್. ಶಿವಪ್ಪ. ಶಶಿಧರ್ ನಾಯಕ್.  ವಿನಾಯಕ್. ಶಶಿ.  ಆದರ್ಶ, ರವರು ಭಾಗಿಯಾಗಿದ್ದರು.

About The Author

Exit mobile version