ಎರಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ – ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಹೊಸನಗರ ತಾಲೂಕಿನ ಮತ್ತಿಕೈ ಗ್ರಾಪಂ ವ್ಯಾಪ್ತಿಯ ಚಂಪಕಾಪುರ ಗ್ರಾಮದಲ್ಲಿ ಮಕ್ಕಳನ್ನು ಬಾವಿಗೆ ದೂಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಲಭಿಸಿದೆ.
ಎರಡು ಪುಟ್ಟ ಮಕ್ಕಳನ್ನು ಬಾವಿಗೆ ದೂಡಿ ತಾನು ಕೂಡ ಬಾವಿಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತಾಲೂಕಿನ ಮತ್ತಿಕೈ ವ್ಯಾಪ್ತಿಯಲ್ಲಿ ಬುಧವಾರ( ಆ.7) ನಡೆದಿತ್ತು.ಚಂಪಕಾಪುರ ನಿವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ(32), ಮಕ್ಕಳಾದ ಸಮರ್ಥ(12), ಸಂಪದ (6) ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೂ ಮುನ್ನ ತಾಯಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಾವಿ ಕಡೆಗೆ ಹೋಗುತ್ತಿರುವಾಗ ತನ್ನ ಅಮ್ಮ ಎಲ್ಲೋ ಕರೆದುಕೊಂಡು ಹೋಗುತಿದ್ದಾಳೆ ಎಂಬ ನಂಬಿಕೆಯಲ್ಲಿ ಎರಡು ಪುಟ್ಟ ಕಂದಮ್ಮಗಳು ಮುಂದೆ ಬರುವ ಸಾವಿನ ಅರಿವಿಲ್ಲದೇ ಅಮ್ಮನ ಟಾರ್ಚ್ ಬೆಳಕಿನಲ್ಲಿ ನಡೆಯುತ್ತಿರುವ ದೃಶ್ಯ ಮನಕಲುಕುವಂತಿದೆ..
ಬಾವಿ ಬಳಿ ಹೋದ ಕೆಲವೆ ಸೆಕೆಂಡುಗಳಲ್ಲಿ ಬಾಲಕ ಸಂಪದ ಅಮ್ಮಾ .. ಅಮ್ಮಾ.. ಅಮ್ಮಾ… ಎಂದು ಕೂಗುವುದು ಕೇಳಿಸುತ್ತದೆ ಇದು ಎಂತಹ ಕಲ್ಲು ಹೃದಯದವರು ಸಹ ಮರುಗುವಂತಿದೆ..
ಈ ಘಟನೆಯ ಬಗ್ಗೆ ಹೊಸನಗರದ ಹಿರಿಯ ಪತ್ರಕರ್ತ ರವಿ ಬಿದನೂರು ಬರೆಯುತ್ತಾ…
ಸಾವು ಅಂತಿಮವಲ್ಲ,ಸಾವೊಂದೇ ಕೊನೆಯಲ್ಲ..
ಆದರೂ ಯಾಕೆ ಈ ನಿರ್ಧಾರ ,
ಎರಡು ಮಕ್ಕಳನ್ನು ಹೆತ್ತು ಹೊತ್ತು ಸಲಹಿದ ನಿನಗೆ ಅದ್ಯಾವ ಖಿನ್ನತೆ , ಮಕ್ಕಳನ್ನು ಹೆರುವಾಗ ಅನುಭವಿಸಿದ ನೋವಿನ ಮುಂದೆ ಸಣ್ಣ ತಲೆನೋವು ನಿನ್ನನ್ನು ಇಹಲೋಕ ತ್ಯಜಿಸುವಂತೆ ಮಾಡಿತೆ..!!
ಆಯ್ತು ಅದು ನಿನ್ನ ನಿರ್ಧಾರ ,ಆದರೆ ಇನ್ನಷ್ಟೇ ಬದುಕಿ ಬಾಳಬೇಕಿದ್ದ
ಆ ಮುದ್ದಾದ ಮಕ್ಕಳಿಗೆ ಯಾಕೆ ನೀನೆ ನೀಡಿದ ಈ ಘೋರ ಶಿಕ್ಷೆ..
ಶಿಕ್ಷೆಯೇ ನೀಡಿದ್ದರೆ ಎಷ್ಟು ಸರಿ.!ನೀನೇಕೆ ಸಾಯುವ ನಿರ್ಧಾರ ಮಾಡಿದೆಯೋ ಗೊತ್ತಿಲ್ಲ…
ಬದುಕು ನೋಡಬೇಕಾಗಿದ್ದ ಮಕ್ಕಳಿಗೆ ಪೂರ್ಣ ವಿರಾಮ ಹಾಕುವ ನಿರ್ಧಾರ ನಿನ್ನದಾಗಿದ್ದರೆ.! ಅದನ್ನು ನೀಡುವ ಅಧಿಕಾರ ನಿನಗೆ ಕೊಟ್ಟವರು ಯಾರು..?? ಅದಕ್ಕೆ ಕ್ಷಮೆ ಇಲ್ಲ ,,, ಕ್ಷಮೆ ಕೊಡೊದು ಇಲ್ಲ…
ಕ್ಷಮೆ ನಿನಗೆ ಬೇಕಾಗಿಯೂ ಇಲ್ಲ .. ಯಾಕೆಂದರೆ ಅವೆಲ್ಲಾವನ್ನು ನೀನು ಬಿಟ್ಟು ಹೋಗಿಯಾಗಿದೆ… ಈ ಸಾವು ನ್ಯಾಯವೇ..
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…
ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…
ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…
ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…