Headlines

Ripponpete | ಹಾವು ಕಡಿದು ರೈತ ಮಹಿಳೆ ಸಾವು

Ripponpete | ಹಾವು ಕಡಿದು ರೈತ ಮಹಿಳೆ ಸಾವು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಪಂ ವ್ಯಾಪ್ತಿಯ ಶುಂಠಿಕೊಪ್ಪ ಗ್ರಾಮದ ಜಮೀನೊಂದರಲ್ಲಿ ಹಾವು ಕಡಿದು ರೈತ ಮಹಿಳೆ ಮೃತಪಟ್ಟ ಘಟನೆ ಜರುಗಿದೆ.

ವೀಣಾ ಕೋಂ ಸತೀಶ್ (35) ಮೃತ ಮಹಿಳೆಯಾಗಿದ್ದಾರೆ.

ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ವೇಳೆ ಹಾವು ಎಡಗಾಲಿನ ಕಿರುಬೆರಳಿಗೆ ಹಾವು ಕಚ್ಚಿದೆ.ಕೂಡಲೇ ನಾಟಿ ಔಷಧಕ್ಕಾಗಿ ಗೆಣಸಿನ ಕುಣಿಗೆ ಕರೆದುಕೊಂಡು ಹೋಗಿ ಆ ನಂತರದಲ್ಲಿ ಸಾಗರದ ಆಸ್ಪತ್ರೆಗೆ ರವಾನಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ.

ಮೃತದೇಹವನ್ನು ಸಾಗರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author

Leave a Reply

Your email address will not be published. Required fields are marked *

Exit mobile version