ಬೈಕ್ ರಿಪೇರಿಗೆಂದು ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ – ಸುಳಿವು ಪತ್ತೆಗೆ ಮನವಿ | Person missing
 ಕೋಣಂದೂರು : ಬೈಕ್ ರಿಪೇರಿ ಮಾಡಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
 ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಅಕ್ಲಾಪುರ ನಿವಾಸಿ ರಾಘು ಶೆಟ್ಟಿಗಾರ್ (41) ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾನೆ.
 ಜುಲೈ 15 ರ ಬೆಳಿಗ್ಗೆ ಅಕ್ಲಾಪುರದಲ್ಲಿರುವ ಮನೆಯಿಂದ ಬೈಕ್ ರಿಪೇರಿ ಮಾಡಿಸಿಕೊಂಡು ಬರುತ್ತೇನೆ ಎಂದು ಹೊರಹೋದ ವ್ಯಕ್ತಿ ನಾಪತ್ತೆಯಾಗಿದ್ದು ಆತನ ಬೈಕ್ ಹಾಗೂ ಮೊಬೈಲ್ ಕೋಣಂದೂರಿನ ಪೆಟ್ರೋಲ್ ಬಂಕ್ ಬಳಿ ಜುಲೈ17 ರ ಬುಧವಾರ ಪತ್ತೆಯಾಗಿದೆ.
 ರಾಘು ಶೆಟ್ಟಿಗಾರ್ ನಾಪತ್ತೆಯಾಗಿರುವ ಬಗ್ಗೆ ಆತನ ಪತ್ನಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 ಪೋಟೋದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕಂಡರೆ ಸ್ಥಳೀಯ ಪೊಲೀಸ್ ಠಾಣೆ ಅಥವಾ 9480657193 , 9980482520 ಈ ನಂಬರ್ ಗೆ ಕರೆ ಮಾಡಿ ತಿಳಿಸಲು ಕೋರಿದ್ದಾರೆ.
  


