January 11, 2026

ನೈರುತ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಭರ್ಜರಿ ಗೆಲುವು -.ರಿಪ್ಪನ್‌ಪೇಟೆಯಲ್ಲಿ ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಾಚರಣೆ | Ripponpete

ನೈರುತ್ಯ  ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ  ಭರ್ಜರಿ ಗೆಲುವು -.
ರಿಪ್ಪನ್‌ಪೇಟೆಯಲ್ಲಿ ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಾಚರಣೆ

ರಿಪ್ಪನ್ ಪೇಟೆ :ನೈರುತ್ಯ ಶಿಕ್ಷಕರ ಹಾಗೂ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿಗಳಾದ ಭೋಜೆಗೌಡ  ಡಾ. ಧನಂಜಯ ಸರ್ಜಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ   ಶುಕ್ರವಾರ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೈರುತ್ಯ ಶಿಕ್ಷಕರ ಹಾಗೂ ಪದವೀಧರ  ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರು, ಪ್ರಧಾನಿ ಮೋದಿ,ಹೆಚ್ ಡಿ ದೇವೆಗೌಡ, ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ,ಹರತಾಳು ಹಾಲಪ್ಪ,ಅವರ ಪರ ಘೋಷಣೆ ಕೂಗಿದರು.

ಈ ಸಂಧರ್ಭದಲ್ಲಿ  ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್ , ಬಿಜೆಪಿ ಮುಖಂಡರಾದ, ಎನ್. ಸತೀಶ್,ಎಂ ಬಿ‌ ಮಂಜುನಾಥ್ ,ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ , ಮುಖಂಡರಾದ ಸುರೇಶ್ ಸಿಂಗ್ , ಸೋಮಶೇಖರ್ ದೂನ , ಪಿ ರಮೇಶ್ , ರಾಮಚಂದ್ರ , ಸುಧೀರ್ ಪಿ , ಮುರುಳಿ ಕೆರೆಹಳ್ಳಿ ,ಈಶ್ವರ್ ಮಳಕೊಪ್ಪ, ಮಹೇಶ್ ಮಸರೂರು,ಹಾಗೂ ಇನ್ನಿತರರಿದ್ದರು.

About The Author

Leave a Reply

Your email address will not be published. Required fields are marked *

Exit mobile version