SSLC ಪಾಸಾದ ಸಂತಸದಲ್ಲಿದ್ದ ವಿದ್ಯಾರ್ಥಿನಿಯ ಬರ್ಬರ ಹತ್ಯೆ : ಬಾಲಕಿಯ ರುಂಡದೊಂದಿಗೆ ಪರಾರಿಯಾಗಿದ್ದ ದುಷ್ಕರ್ಮಿ ಆತ್ಮಹತ್ಯೆ
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೂರ್ಲಬಿ ಗ್ರಾಮದಲ್ಲಿ ಗುರುವಾರ (ಮೇ 09) ರಾಜ್ಯವೇ ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಕೊಲೆ ಮಾಡಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಡಗಿನ (Kodagu) ಸೋಮವಾರಪೇಟೆಯ (Somwarpet) ಸೂರ್ಲಬ್ಬಿ ಗ್ರಮಾದಲ್ಲಿ ಘಟನೆ ನಡೆದಿದೆ. ಓಂಕಾರಾಪ್ಪ ಕೊಲೆ ಆರೋಪಿ. ಮೀನಾ ಮೃತ ವಿದ್ಯಾರ್ಥಿನಿ. ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೀನಾ ಉತ್ತಮ ಅಂಕ ಪಡೆದು ಪಾಸಾಗಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಮೀನಾ ಮತ್ತು ಆಕೆಯ ಪೋಷಕರು ಇದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ.
ಸೂರ್ಯ ಮುಳುಗುತ್ತಿದ್ದ ಹಾಗೇ ವಿದ್ಯಾರ್ಥಿನಿಯ ಜೀವ ಕೂಡ ಅಂತ್ಯವಾಗಿದೆ. ಹೌದು ಆರೋಪಿ ಓಂಕಾರಪ್ಪ ಸಾಯಂಕಾಲ ಸಮಯದಲ್ಲಿ ಮೀನಾಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಚ್ಚಿನಿಂದ ವಿದ್ಯಾರ್ಥಿನಿಯ ತಲೆ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದಿದ್ದಾನೆ.
ಮನೆ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಆರೋಪಿ :
ಮುಟ್ಲು ಗ್ರಾಮದಲ್ಲಿ 15 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ರುಂಡ ಕತ್ತರಿಸಿ, ಬರ್ಬರವಾಗಿ ಕೊಂದು, ಬಳಿಕ ರುಂಡದ ಜೊತೆ ಎಸ್ಕೇಪ್ ಆಗಿದ್ದ ಆರೋಪಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
32 ವರ್ಷದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂಬಾತ ಸೋಮವಾರಪೇಟೆಯ ತನ್ನ ಗ್ರಾಮ ಹಮ್ಮಿಯಾಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ಮನೆ ಬಳಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.
ಓಂಕಾರಪ್ಪನೊಂದಿಗೆ ಮೀನಾಳ ನಿಶ್ಚಿತಾರ್ಥ ನಿನ್ನೆ ಫಿಕ್ಸ್ ಮಾಡಲಾಗಿತ್ತು. ಈ ವಿಚಾರ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದಾರೆ. ಬಳಿಕ ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆರೋಪಿ ಕೂಡ ಮನೆಗೆ ವಾಪಸ್ ಆಗಿದ್ದನಂತೆ. ಇದೇ ಸಿಟ್ಟಿನಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ಬಾಲಕಿಯೊಂದಿಗೆ ಆರೋಪಿ ನಿಶ್ಚಿತಾರ್ಥ!
ಬಾಲಕಿಗೂ ಆರೋಪಿಗೂ ಮದುವೆ ನಿಶ್ಚಿತಾರ್ಥ ನಿನ್ನೆ ನಡೆಯುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಡೆದು ಬಾಲ್ಯವಿವಾಹ ಮಾಡಬಾರದು ಎಂದು ಪೋಷಕರ ಮನವೊಲಿಸಿದ್ದರು. ನಂತರ ಸಂಜೆ ವೇಳೆಯಲ್ಲಿ ಮನೆಗೆ ನುಗ್ಗಿದ ಆರೋಪಿಯು ಬಾಲಕಿಯ ಮನೆಯವರೊಂದಿಗೆ ಜಗಳ ಮಾಡಿ ಬಾಲಕಿಯ ಪೋಷಕರ ಮೇಲೆ ಹಲ್ಲೇ ಮಾಡಿ ನಂತರ ಬಾಲಕಿಯನ್ನು ಪೋಷಕರ ಮುಂದೆಯೇ ಅಪಹರಿಸಿದ್ದ ಎನ್ನಲಾಗಿದೆ.
ಬಾಲಕಿಯ ರುಂಡದೊಂದಿಗೆ ಎಸ್ಕೇಪ್ ಆಗಿದ್ದ ಆರೋಪಿ
ಕಾಡಂಚಿನ ಪ್ರದೇಶದಲ್ಲಿ ಬಾಲಕಿಯನ್ನು ಎಳೆದೊಯ್ದು ಕತ್ತಿಯಿಂದ ಹಲ್ಲೇ ನಡೆಸಿ ಕುತ್ತಿಗೆಯ ಭಾಗಕ್ಕೆ ಕತ್ತಿಯಿಂದ ಹಲ್ಲೇ ನಡೆಸಿ ರುಂಡದೊಂದಿಗೆ ಅರೋಪಿ ಪರಾರಿಯಾಗಿದ್ದ. ಬಾಲಕಿಯ ಮುಂಡ ಮಾತ್ರ ಸಿಕ್ಕಿದ್ದು ಆರೋಪಿಗಾಗಿ ಹಾಗೂ ದೇಹದ ಉಳಿದ ಭಾಗಗಳಿಗಾಗಿ ಇಂದು ಬೆಳಿಗ್ಗೆಯಿಂದಲ್ಲೂ ಪೊಲೀಸರು ಶ್ವಾನಧಾಳದೊಂದಿಗೆ ಗ್ರಾಮದ ಬೆಟ್ಟ ಗುಡ್ಡ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದರು.
ಮದುವೆ ಇಷ್ಟ ಇಲ್ಲ ಎಂದು ಹೇಳಿದ್ದಳಂತೆ ಬಾಲಕಿ?
ಕಳೆದ ಒಂದು ವಾರದ ಹಿಂದೆ ಬಾಲಕಿ ತನ್ನ ಸಹೋದರಿ ಮನೆಗೆ ತೆರಳಿದ ಸಂದರ್ಭದಲ್ಲಿ ತನ್ನ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತಾನಾಡುವ ಸಂದರ್ಭದಲ್ಲಿ ತಾನು ಪ್ರಕಾಶ್‌ನೊಂದಿಗೆ ಮದುವೆ ಅಗಲ್ಲ ಎಂದು ತಿಳಿಸಿದ್ದಳಂತೆ. ಅದ್ರೆ ಮನೆಯವರು ಹಲವಾರು ವರ್ಷಗಳಿಂದ ಓಡಾಟ ನಡೆಸಿದ್ದೀರಾ, ಪ್ರೀತಿ ಮಾಡಿದ್ದೀರ ಎಂದು ತಾವೇ ಹೇಳಿಕೊಂಡು ಇದೀರ ಇದೀಗಾ ಮದುವೆ ಬೇಡ ಅನ್ನೋದು ಸರಿ ಅಲ್ಲ ಎಂದಿದ್ದರಂತೆ.
ಸದ್ಯಕ್ಕೆ ಸಣ್ಣದಾಗಿ ನಿಶ್ಚಿತಾರ್ಥ ಮುಗಿಸುವ ನಂತರ ಪ್ರಕಾಶ್ ಉದ್ಯೋಗ ಮಾಡಲು ಬೆಂಗಳೂರಿಗೆ ಹೋಗುತ್ತಾನೆ. ನಂತರ ಮದುವೆ ಮಾಡಿಸುವ ಎಂದು ತಿಳಿಸಿದ್ದರಂತೆ. ಪೋಷಕರ ಮಾತು ಕೇಳಿದ ಬಾಲಕಿ ನಿಶ್ಚಿತಾರ್ಥ ಮಾಡಿಕೊಳ್ಳಲು ಒಪ್ಪಿದ್ದಾಳೆ. ನಿನ್ನೆ ಮನೆಯಲ್ಲಿ ಹತ್ತನೇ ತರಗತಿ ಪಾಸು ಅಗೋದು ಅಲ್ಲದೇ ನಿಶ್ಚಿತಾರ್ಥ ಇರುವುದರಿಂದ ಮನೆಯಲ್ಲಿ ಸಂಭ್ರಮ ವಾತಾವರಣ ನಿರ್ಮಾವಾಗಿ ಗ್ರಾಮಸ್ಥರಿಗೆ ಔತಣಕೂಟವನ್ನು ಮಾಡಲಾಗಿತ್ತು. ಆದ್ರೆ ಸಂಜೆ ಎಲ್ಲವೂ ಸ್ಮಶಾನದಂತಾಗಿತ್ತು.
ಆರೋಪಿ ಬಗ್ಗೆ ಗ್ರಾಮಸ್ಥರ ಆಕ್ರೋಶ
ಗ್ರಾಮದಲ್ಲಿ ಬಾಲಕಿಯನ್ನು ಹತ್ಯೆ ಮಾಡಿರುವ ಪ್ರಕಾಶ್ ಊರಿನಲ್ಲಿ ಯಾರೊಂದಿಗೂ ಒಳ್ಳೆಯನಂತೆ ಇಲ್ಲದೇ ಒರಟಾನಾಗಿ ವರ್ತನೆ ಮಾಡುತ್ತಿದ್ದ ಎನ್ನಲಾಗಿದೆ. ಶಾಲೆಗೆ ಬಾಲಕಿ ಹೋದ್ರೂ, ಆಕೆಯೊಂದಿಗೆ ಓಡಾಟ ನಡೆಸುತ್ತಿದ್ದನಂತೆ. ಹೀಗೆಲ್ಲಾ ಸಣ್ಣ ಹುಡುಗಿಯ ಜೊತೆ ಹೋಗಬರದು ಎಂದ್ರೆ ಅಕೆಗೆ ಎಲ್ಲಾ ನಾನೇ ಎನ್ನುತ್ತಿದ್ದಂನಂತೆ.
ಆರೋಪಿ ಸೂಸೈಡ್, ಬಾಲಕಿ ರುಂಡಕ್ಕಾಗಿ ಹುಡುಕಾಟ!
ಸದ್ಯ ಆರೋಪಿ ಪ್ರಕಾಶ್ ಸೂಸೈಡ್ ಮಾಡಿಕೊಂಡಿದ್ದಾನೆ. ಆತನ ಮನೆ ಬಳಿಯೇ ನೇಣು ಬಿಗಿದ ಸ್ಥಳದಲ್ಲಿ ಆತನ ಶವ ಪತ್ತೆಯಾಗಿದೆ. ಇದೀಗ ಬಾಲಕಿಯ ರುಂಡಕ್ಕಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.