ರಿಪ್ಪನ್‌ಪೇಟೆ – ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿಯ 117 ನೇ ಜನ್ಮ ದಿನಾಚರಣೆ
ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ 117ನೇ ಜನ್ಮ ದಿನಾಚರಣೆಯನ್ನು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಆಚರಿಸಲಾಯಿತು.
ಪಟ್ಟಣದ ಗ್ರಾಪಂ ಸಭಾಭವನದಲ್ಲಿ ಡಾ.ಶಿವಕುಮಾರ ಸ್ವಾಮೀಜಿರವರ ಭಕ್ತ ವೃಂದ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಳಲಿ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಜಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಆಶೀರ್ವಚನ ನೀಡಿ ಕಲಿಯುಗದ ನಡೆದಾಡುವ ದೇವರಾದ ಡಾ. ಶಿವಕುಮಾರ ಸ್ವಾಮೀಜಿ ಯವರು ಕೋಟ್ಯಾಂತರ ಮಂದಿಗೆ ತ್ರಿವಿಧ ದಾಸೋಹದ ಜೊತೆಯಲ್ಲೇ ಸಂಸ್ಕಾರದ ಶಿಕ್ಷಣದ ಧರ್ಮದ ಜ್ಞಾನದ ದೇವರಾಗಿದ್ದಾರೆ ಎಂದರು.
ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡಿದ ಮಹಾಪುರುಷರು. ವಿದ್ಯೆ ಕಡಿಮೆ ಇದ್ದರೂ ಪರವಾಗಿಲ್ಲ ನಡತೆ ಶುದ್ಧವಾಗಿರಬೇಕೆಂಬ ಗುರುಗಳು ಆದೇಶ ಪ್ರಸ್ತುತ ಸಮಾಜಕ್ಕೆ ಬಹಳ ಅಗತ್ಯವಾಗಿದೆ. ಅಕ್ಷರ ಕಲಿತಿದ್ದೇವೆ, ಬಹಳ ಬುದ್ಧಿವಂತಿಕೆ ಇದೆ ಎಂಬ ಕಾರಣಕ್ಕೆ ಅಹಂ ಹೊಂದಿದರೆ, ಅದು ನಮ್ಮ ಸಾಧನೆಗೆ ಅಡ್ಡಿಯಾಗಲಿದೆ ಎಂಬ ವಿವೇಚನೆ ಇರಬೇಕು ಎಂದು ಸಿದ್ಧಗಂಗಾ ಶ್ರೀಗಳು ಹೇಳುತ್ತಿದ್ದ ಮಾತು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಶಿವಕುಮಾರ ಸ್ವಾಮೀಜಿಭಕ್ತ ವೃಂದ ಸಮಿತಿ ಅಧ್ಯಕ್ಷರಾದ ಕಗ್ಗಲಿ ಲಿಂಗಪ್ಪ ವಹಿಸಿದ್ದರು.
ಈ ಸಂಧರ್ಭದಲ್ಲಿ ಪಶು ವೈದ್ಯಕೀಯ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಮಚಂದ್ರ ರಾವ್ , ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ ಪದ್ಮಾವತಿ ಕುಮಾರ್, ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ದುಂಡುರಾಜಪ್ಪ ಗೌಡ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಭಕ್ತ ವೃಂದ ಸಮಿತಿಯ ಸೋಮಶೇಖರ್ ,ಸತೀಶ್ ಹೆಗಡೆ ,ಶ್ರೀಧರ್ , ನಿರಂಜನ್ ಕನ್ನಡಿಗ , ನಾಗರತ್ನ ದೇವರಾಜ್ ,ಶೀಲಾ ಆರ್ ಡಿ, ಇಂದಿರಮ್ಮ,ರೇಖಾ ಹಾಗೂ ಇನ್ನಿತರರಿದ್ದರು.
ಡಾ. ಗಣೇಶ್ ಕೆಂಚನಾಲ ಕಾರ್ಯಕ್ರಮವನ್ನು ನಿರೂಪಿಸಿದರು.