ಮದ್ಯ ಮಾಂಸಕ್ಕಾಗಿ ಅಪ್ರಾಪ್ತ ಬಾಲಕಿಯನ್ನು ಪಾಪದ ಕೂಪಕ್ಕೆ ತಳ್ಳಿದಳಾ ಚಿಕ್ಕಮ್ಮ..!!??
ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಎರಡು ಪ್ರಕರಣದಲ್ಲಿ ಮೂವರು ಆರೋಪಿಯನ್ನು ಬಂಧಿಸಲಾಗಿದೆ.
ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಯುವರಾಜ್ (25) ,ವಿಜಯ್ ಕುಮಾರ್ ಹಾಗೂ ಸಾವಿತ್ರಿ ಬಂಧಿತ ಆರೋಪಿಗಳಾಗಿದ್ದಾರೆ.
ಮದ್ಯ ಮತ್ತು ಮಾಂಸಕ್ಕಾಗಿ ಸ್ವಂತ ಅಕ್ಕನ ಮಗಳನ್ನೆ ಪಾಪದ ಕೂಪಕ್ಕೆ ತಳ್ಳಿರುವ ಚಿಕ್ಕಮ್ಮಳ ಕ್ರೌರ್ಯಕ್ಕೆ ಅಪ್ರಾಪ್ತ ಯುವತಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ನಡೆದಿದೆ.
ಘಟನೆಯ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳ ಬಂಧನವಾಗಿದೆ.
ಪ್ರಕರಣ 1 :
ನೋನಿ ಹಬ್ಬದ ಹಿನ್ನಲೆಯಲ್ಲಿ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ತನ್ನ ಚಿಕ್ಕಮನ ಮನೆಗೆ ಅಪ್ರಾಪ್ತ ಯುವತಿಯ ಬಂದಿದ್ದಳು ಈ ಸಂದರ್ಭದಲ್ಲಿ ಚಿಕ್ಕಮ್ಮಳ ಪರಿಚಿತನಾದ ಯುವರಾಜ್ ಎಂಬಾತ ಒಂದು ದಿನ ಚಿಕ್ಕಮ್ಮಳಿಗೆ ಮದ್ಯವನ್ನು ತಂದುಕೊಟ್ಟಿದ್ದಾನೆ ಈ ಸಂಧರ್ಭದಲ್ಲಿ ಚಿಕ್ಕಮ್ಮ ಯುವರಾಜನೊಂದಿಗೆ ಹೋಗಿ ಬಾ ಎಂದಿದ್ದಾಳೆ.ನಂತರ ಅಪ್ರಾಪ್ತ ಬಾಲಕಿಯನ್ನು ಮನೆಯ ಹಿಂಬದಿಯ ತೋಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ.ನಂತರ ಬಾಲಕಿ ಅಳುತಿದ್ದಾಗ ಮದುವೆಯಾಗುವುದಾಗಿ ನಂಬಿಸಿದ್ದಕ್ಕೆ ಬಾಲಕಿ ಸುಮ್ಮನಾಗಿದ್ದಳು.
ಸುಮಾರು ಎರಡು ತಿಂಗಳು ಇದೇ ರೀತಿ ವಾರಕ್ಕೆ ಒಂದೆರಡು ಬಾರಿ ಯುವರಾಜನೊಂದಿಗೆ ಬಾಲಕಿಯನ್ನು ಚಿಕ್ಕಮ ಕಳಿಸಿಕೊಡುತ್ತಿದ್ದಳು. ನಂತರ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವ ವಿಚಾರ ತಾಯಿಗೆ ತಿಳಿದ ನಂತರ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ 2 :
ಅಪ್ರಾಪ್ತ ಬಾಲಕಿ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಚಿಕ್ಕಮ್ಮನ ಮನೆಯಲ್ಲಿಯೇ ಇರುವಾಗ ದಿನಾಂಕ: 21/03/2024 ರಂದು ಸಂಜೆ ಸುಮಾರು ಆಗಾಗ ಚಿಕ್ಕಮ್ಮ ಸಾವಿತ್ರಿ ರವರ ಮನೆಗೆ ಬರುತ್ತಿದ್ದ ವಿಜಯ ಕುಮಾರನು ಚಿಕನ್ ಮತ್ತು ಡ್ರಿಂಕ್ಸ್ ತೆಗೆದುಕೊಂಡು ಬಂದಿದ್ದು, ಅಡುಗೆ ಮಾಡಿ ಊಟ ಮಾಡಿದ ನಂತರ ಚಿಕ್ಕಮ್ಮ ಸಾವಿತ್ರಿ ಮತ್ತು ವಿಯಜಕುಮಾರನು ಮನೆಯ ಹಿಂಬಾಗ ಹೋಗಿ ಏನನ್ನೋ ಮಾತನಾಡಿಕೊಂಡು ಬಂದ ನಂತರ ಎಲ್ಲರೂ ಮಲಗಿದ್ದ ಸಮಯದಲ್ಲಿ ವಿಜಯ್ ಕುಮಾರನು ಅಪ್ರಾಪ್ತ ಬಾಲಕಿಯ ಮೈ ಕೈ ಮುಟ್ಟಿದಾಗ ವಿಜಯ್ ಕುಮಾರನಿಗೆ ಬೇಡ ಬೇಡ ತಾನು ಗರ್ಭಿಣಿಯಾಗಿದ್ದೇನೆ ಎಂದು ಅಂಗಲಾಚಿದರೂ ಬಲವಂತವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಾರನೇ ದಿನ ಈ ವಿಚಾರವನ್ನು ಚಿಕ್ಕಮ್ಮ ಸಾವಿತ್ರಿ ರವರಿಗೆ ಹೇಳಿದಾಗ ಆಯ್ತು ಬಿಡು ನಾನೇ ಹೇಳಿ ಕರೆಯಿಸಿದ್ದೆ. ಏನೂ ಆಗಲ್ಲ ಬಿಡು ಅಂತಾ ಹೇಳಿದ್ದಾರೆ.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಫೋಕ್ಸೋ ಕಾಯ್ದೆಯಡಿ ವಿಜಯ್ ಕುಮಾರ್ ನ್ನು ಬಂಧಿಸಲಾಗಿದೆ.