Headlines

Humcha| ಹೊಂಬುಜಾ ಶ್ರೀಕ್ಷೇತ್ರಕ್ಕೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ

Humcha| ಹೊಂಬುಜಾ ಶ್ರೀಕ್ಷೇತ್ರಕ್ಕೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ


ರಿಪ್ಪನ್‌ಪೇಟೆ – ಇಲ್ಲಿನ ಹೊಂಬುಜಾ ಶ್ರೀಕ್ಷೇತ್ರಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಭೇಟಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಘೋಷಣೆ ಮಾಡಿರುವ ಈಶ್ವರಪ್ಪ (K.S Eshwarappa) ಅವರನ್ನು ಮನವೊಲಿಸಲು ಬಿಜೆಪಿ (BJP) ನಾಯಕರು ಕಸರತ್ತು ಮಾಡುತ್ತಿದ್ದಾರೆ ಆದರೆ ಈಶ್ವರಪ್ಪ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ‌ ನೀಡುತಿದ್ದಾರೆ.


ಇಂದು ಹೊಸನಗರ ತಾಲೂಕಿನ ಹೊಂಬುಜ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರು ಹೊಂಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಈಶ್ವರಪ್ಪ ನಮಗೆ ತಂದೆ ಸಮಾನ – ಬಿವೈಆರ್

ಮಾಜಿ ಸಚಿವ ಕೆಎಸ್ ಈಶ್ವರಪ್ಪ (Former Minister KS Eshwarappa) ಅವರ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರನೂ ಆಯ್ತು. ಅವರಿಂದ ನಮಗೆ ತುಂಬಾ ನೋವು ಆಯ್ತು ಮಾದ್ಯಮಕ್ಕೆ ಶಿವಮೊಗ್ಗ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ‌ವೈ ರಾಘವೇಂದ್ರ (BJP Candidate BY Raghavendra) ಹೇಳಿಕೆ ನೀಡಿದ್ದಾರೆ.

ಕಳೆದ ಎರಡು ಮೂರು ಚುನಾವಣೆಗಳಲ್ಲಿ (Election) ಅವರ ಆಶೀರ್ವಾದಿಂದಲೇ ನಾನು ಸ್ಪರ್ಧೆ ಮಾಡಿದ್ದೆ. ಅವರು ನಮ್ಮ ತಂದೆಯವಂತೆ ಇರುವ ವ್ಯಕ್ತಿ. ಮುಂದೆ ನನಗೆ ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು. ಇನ್ನೂ ಎರಡು ಮೂರು ದಿನಗಳಲ್ಲಿ ನಮ್ಮ ವರಿಷ್ಠರು ಅವರ ಜೊತೆ ಮಾತಾಡ್ತಾರೆ ಎಂದರು.

Leave a Reply

Your email address will not be published. Required fields are marked *

Exit mobile version