Headlines

ತಂಗಿ ಮನೆಗೆ ಹೋಗಿ ಹಿಂದಿರುಗುವಾಗ ಮನೆ ಕಳ್ಳತನ – ಮಗನ ವಿರುದ್ದವೇ ದೂರು ನೀಡಿದ ತಾಯಿ | Theft

ತಂಗಿ ಮನೆಗೆ ಹೋಗಿ ಹಿಂದಿರುಗುವಾಗ ಮನೆ ಕಳ್ಳತನ – ಮಗನ ವಿರುದ್ದವೇ ದೂರು ನೀಡಿದ ತಾಯಿ | Theft


ಮನೆಯಲ್ಲಿ ಕಳ್ಳತನವಾಗಿದ್ದು(theft) ಇದಕ್ಕೆ ತನ್ನ ಸ್ವಂತ ಮಗನೇ ಕಾರಣ ಎಂದು ಹೆತ್ತ ತಾಯಿಯೇ ತನ್ನ ಮಗನ ಮೇಲೆ ಕಳ್ಳತನದ ಆರೋಪ ಹೊರಿಸಿರುವ ಘಟನೆ ಶಿವಮೊಗ್ಗ(Shivamogga) ನಗರದ ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ಹಿನ್ನಲೆ :

ಫೆಬ್ರವರಿ ತಿಂಗಳಿನಲ್ಲಿ ನಡೆದ ಘಟನೆ ಸಂಬಂದ ತುಂಗಾನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ : IPC 1860 (U/s-380) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಮಹಿಳೆಯೊಬ್ಬರು ಈ ಬಗ್ಗೆ  ತಡವಾಗಿ ದೂರು ನೀಡಿದ್ದಾರೆ. ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿರುವ ತಂಗಿ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಘಟನೆಯು ನಡೆದಿದೆ ಎಂದು ಆರೋಪಿಸಿದ್ದಾರೆ.

ವಾಪಸ್‌ ಮನೆಗೆ ಬಂದು ನೋಡಿದಾಗ ಮನೆ ಬೀಗ ಹಾಕಿರುವುದು ಕಂಡು ಇನ್ನೊಂದು ಕೀನಲ್ಲಿ ಬಾಗಿಲು ತೆಗೆದಾಗ ಮನೆಯಲ್ಲಿದ್ದ  ಬಂಗಾರ , ಪ್ರಿಡ್ಜು, ಟಿವಿ, ಟಿಪಾಯಿ, ಮಿಕ್ಸಿ ಸೇರಿದಂತೆ ಗೃಹೊಪಯೋಗಿ ವಸ್ತುಗಳು ಇಲ್ಲದಿರುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದ ನಂತರ ತಮ್ಮ ಮಗ ಅದನ್ನೆಲ್ಲಾ ವಾಪಸ್‌ ತಂದುಕೊಡುವ  ಸಾಧ್ಯತೆಯಿಂದ ಎಂದು ಕಾದಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಇದೇ ವಿಚಾರದಲ್ಲಿ ಮಹಿಳೆ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Exit mobile version