ಹೊಸನಗರ : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 64.75 ಲೀ ಮದ್ಯ ವಶ – ಓರ್ವನ ಬಂಧನ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾರುತಿಪುರದ ಸುರೇಶ್ ಶೆಟ್ಟಿ ಎಂಬಾತನ ಮನೆಯ ಮೇಲೆ ಹೊಸನಗರ ಅಬಕಾರಿ ಇಲಾಖೆಯವರು ಖಚಿತ ಅಧಾರದ ಮೇಲೆ ದಾಳಿ ನಡೆಸಿ ಸುಮಾರು 64.75 ಲೀಟರ್ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಅಕ್ರಮ ಮದ್ಯದ ಬೆಲೆಯು 28,134 ರೂ.ಗಳಾಗಿದ್ದು ಸುರೇಶ್‌ಶೆಟ್ಟಿಯ ವಿರುದ್ದ ಕೇಸ್ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಆಯುಕ್ತರು ಬೆಂಗಳೂರು ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ…


