ಬಂಗಾರಪ್ಪ ಕುಟುಂಬದ ಮಧು ಮತ್ತು ಕುಮಾರ್ ಒಂದಾಗಲಿ – ಹರತಾಳು ಹಾಲಪ್ಪ | haratalu halappa
ಸಾಗರ : ನಾವೆಲ್ಲರೂ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಬಂದವರು. ನನಗೂ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಒಂದಾದರೆ, ಗುರುಗಳಾದ ಬಂಗಾರಪ್ಪನವರ ಕುಟುಂಬ ಒಟ್ಟಾದರೆ ಸಂತೋಷವಿದೆ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು ಪ್ರತಿಕ್ರಿಯಿಸಿದ್ದಾರೆ.
ಮಾದ್ಯಮದವರೊಂದಿಗೆ ಶನಿವಾರದಂದು ಸಂವಾದ ನಡೆಸಿದ ಅವರು, ಕಟ್ಟಾ ಬಿಜೆಪಿಗನಾಗಿ ಈ ಮಾತನ್ನು ಹೇಳಲು ಬಯಸುವುದಿಲ್ಲ.ಆದರೆ ಒಬ್ಬ ಈಡಿಗನಾಗಿ ಹಾಗೇನಾದರೂ ಅವರಿಬ್ಬರೂ ಮತ್ತೆ ಒಗ್ಗೂಡಿದರೆ ಖುಷಿಯ ವಿಚಾರ ಎಂದರು.
ಆರ್ಯ ಈಡಿಗ ಸಮಾವೇಶ ಇದಕ್ಕೆ ನಾಂದಿ ಹಾಡುತ್ತದೆಯಾ ಎಂಬ ಪತ್ರಕರ್ತರ ಕುತೂಹಲಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ, ಗೊತ್ತಿಲ್ಲ. ಮಲೆನಾಡಿನ ಸಮಸ್ಯೆಗಳಾಗದ ಶರಾವತಿ ಸಂತ್ರಸ್ಥರಿಗೆ ನೆರವು, ಬಗರ್ ಹುಕುಂ ಮೊದಲಾದವು ರೈತರಿಗೆ ಮಾರಕವಾಗಿದೆ.
ಹೆಚ್ಚಿನದಾಗಿ ಈಡಿಗರೇ ಕಾನೂನಿನಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಸರಕಾರ ಕೂಡಲೆ ಇದನ್ನು ಬಗೆಹರಿಸಲು ಮುಂದಾಗಬೇಕೆನ್ನುವುದು ಸಮಾಜದ ಒತ್ತಾಯವಾಗಿದೆ. ಬಿ.ಕೆ. ಹರಿಪ್ರಸಾದ್ ಹಿರಿಯ ನಾಯಕರು. ಅವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಅದನ್ನು ಅಧಿಕಾರದಲ್ಲಿರುವವರು ಗೌರವದಿಂದ ಸ್ವೀಕರಿಸಬೇಕು ಎಂದು ಅಭಿಪ್ರಾಯಪಟ್ಟರು.