ರಿಪ್ಪನ್‌ಪೇಟೆ – ಇಲ್ಲಿನ ತಾಲೂಕ್ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ 29|10|2023 ರಂದು ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಂಘದ ನಿರ್ದೇಶಕ ಹಾಗೂ ದೂರುದಾರ ಪುರುಷೋತ್ತಮ್ ಹೆಚ್ ಹೆಚ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
29|10|2023 ರಂದು ಹೊಸನಗರ ತಾಲೂಕ್ ಒಕ್ಕಲಿಗರ ಸಂಘ ರಿಪ್ಪನ್‌ಪೇಟೆಯ 19 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು.
ಈ ಸಂಬಂಧ ಸಂಘದ ಹಾಲಿ ನಿರ್ದೇಶಕರುಗಳಾದ ಹಾಲುಗುಡ್ಡೆಯ ಪುರುಷೋತ್ತಮ್ ಹೆಚ್ ಹೆಚ್ ಮತ್ತು ರಾಜೇಶ್ ಹೆಚ್ ವೈ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಿ ಎಂ ಪೂನಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಚುನಾವಣೆಗೆ ತಡೆಯಾಜ್ಞೆ ನೀಡಿದೆ ಎಂದರು.
ಮೇಲ್ಮನವಿದಾರರ ಪರ ಹಾಜರಾಗಿದ್ದ ವಕೀಲ ಭಾರ್ಗವ್ ವಾದ ಮಂಡಿಸಿ 04|09|2022 ರಂದು ಒಕ್ಕಲಿಗರ ಸಂಘದ ಚುನಾವಣೆ ನಡೆದು 15 ನಿರ್ದೇಶಕರುಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು ಆದರೆ ಕೆಲವು ನಿರ್ದೇಶಕರುಗಳು ಸಂಘವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಪಡೆಯುವ ಹುನ್ನಾರದಿಂದ ಕಾನೂನು ಬಾಹಿರವಾಗಿ ಅವಧಿಪೂರ್ವ ಚುನಾವಣೆ ನಡೆಸುತಿದ್ದಾರೆ ಎಂದು ವಾದ ಮಂಡಿಸಿದರು.
ಈ ಹಿನ್ನಲೆಯಲ್ಲಿ 29|10|2023 ರಂದು ನಡೆಯಬೇಕಿದ್ದ ಹೊಸನಗರ ತಾಲೂಕ್ ಒಕ್ಕಲಿಗರ ಸಂಘ ರಿಪ್ಪನ್‌ಪೇಟೆ ಘಟಕದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ದೂರುದಾರ ಪುರುಷೋತ್ತಮ್ ತಿಳಿಸಿದ್ದಾರೆ.