Headlines

ಪಾದಚಾರಿಯ ಮೇಲೆ ಹರಿದು ಲೈಟ್ ಕಂಬಕ್ಕೆ ಡಿಕ್ಕಿಯಾದ ಬೈಕ್ – ಇಬ್ಬರು ಸಾವು|accident

ಪಾದಚಾರಿಯ ಮೇಲೆ ಹರಿದು ಲೈಟ್ ಕಂಬಕ್ಕೆ ಡಿಕ್ಕಿಯಾದ ಬೈಕ್ – ಇಬ್ಬರು ಸಾವು

ಬೈಕ್​ ಅಪಘಾತವೊಂದರಲ್ಲಿ  ಪಾದಚಾರಿ ಹಾಗೂ ಬೈಕ್​ ಸವಾರ ಇಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆ ಗ್ರಾಮಾಂತರ ವ್ಯಾಪ್ತಿಯ ಸುತ್ತುಕೋಟೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಹನುಮಮಂತಪ್ಪ ಹಾಗೂ ಮೇಘರಾಜ್ ಎಂಬವರು ಸಾವನ್ನಪ್ಪಿದ್ದಾರೆ. 

ಶಿವಮೊಗ್ಗದ ಹೊನ್ನಾಪುರದ ಮೇಘರಾಜ್ ಎಂಬವರು ಶಿವಮೊಗ್ಗ, ಆಯನೂರು , ಕುಂಸಿ ಚೋರಡಿ ಮಾರ್ಗವಾಗಿ ಶಿರಾಳಕೊಪ್ಪದ ಮಂಚಿಕೊಪ್ಪಕ್ಕೆ ಹೋಗುತ್ತಿದ್ದರು. ಈ ವೇಳೆ ಸುತ್ತುಕೋಟೆಯಲ್ಲಿ  ಬಳಿ ಹನುಮಂತಪ್ಪ ಎಂಬವರು ನಡೆದುಕೊಂಡು ಬರುತ್ತಿದ್ದರು. ರಾತ್ರಿ ಕತ್ತಲಲ್ಲಿ ಮೇಘರಾಜ್​ ಬೈಕ್ ಹನುಮಂತಪ್ಪರವರಿಗೆ ಡಿಕ್ಕಿ ಹೊಡೆದಿದೆ. ಇನ್ನೊಂದೆಡೆ ನಿಯಂತ್ರಣಕ್ಕೆ ಸಿಗದ ಬೈಕ್​ ಕರೆಂಟ್ ಕಂಬಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಮೇಘರಾಜ್​ಗೆ ಗಂಭೀರ ಗಾಯವಾಗಿ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ  ಪಾದಚಾರಿ ಹನುಮಂತಪ್ಪ ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ಸುತ್ತುಕೋಟೆಯಲ್ಲಿ ನಿನ್ನೆ ರಾತ್ರಿ ಮೇಘರಾಜ್ ಎಂಬ 28 ವರ್ಷದ ಯುವಕ ಶಿವಮೊಗ್ಗದಿಂದ ಶಿರಾಳಕೊಪ್ಪದ ಮಂಚಿನಕೊಪ್ಪಕ್ಕೆ ಬೈಕ್ ನಲ್ಲಿ ಹೋಗುವಾಗ ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದ ಹನುಮಂತಪ್ಪ ಎಂಬುವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಮೇಘರಾಜ್ ವಿದ್ಯುತ್ ಕಂಬಕ್ಕೆ ಗುದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಶಿಕಾರಿಪುರ ತಾಲೂಕಿನ ಕೆಂಗಟ್ಟೆ ನಿವಾಸಿ ಹನುಮಂತಪ್ಪ (35)  ಸುತ್ತುಕೋಟೆಯಲ್ಲಿ ಹಬ್ಬದ ಪ್ರಯುಕ್ತ, ಸಂಬಂಧೀಕರ ಮನೆಗೆ ಬಂದಿದ್ದ ಇವರು ರಾತ್ರಿ ರಸ್ರೆಯ ಬದಿ ನಡೆದು ಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಹನುಮಂತಪ್ಪರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಶಿವಮೊಗ್ಗದ ಹೊನ್ನಾಪುರದಲ್ಲಿ ನೆಲೆಸಿದ್ದ ಮಂಚಿಕೊಪ್ಪದ ಮೇಘರಾಜ್ ಸ್ನೇಹಿತರೊಂದಿಗೆ ಬೆಳಿಗ್ಗೆ ಸಕ್ರೆಬೈಲಿಗೆ ತೆರಳಿಗೆ ಅಲ್ಲಿ ಫೋಟೊಕ್ಲಿಕ್ಕಿಸಿಕೊಂಡು ರಾತ್ರಿಯ ವೇಳೆಗೆ ಚೋರಡಿ ಮೂಲಕ ಶಿಕಾರಿಪುರಕ್ಕೆ ತೆರಳುವಾಗ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

Exit mobile version