ಆಗುಂಬೆ ಘಾಟಿಯಲ್ಲಿ ಶಾಲಾ ಮಕ್ಕಳಿದ್ದ ಸ್ಕೂಲ್ ಬಸ್ ಅಪಘಾತ
ತೀರ್ಥಹಳ್ಳಿ: ಬೆಂಗಳೂರಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರು ಹೋಗುವಾಗ ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾದ ಘಟನೆ ಸಂಭವಿಸಿದೆ.
ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗದ ಸಮೀಪ ಮೊದಲ ತಿರುವಲ್ಲಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಘಾಟಿ ಕೆಳಗೆ ಬೀಳುವ ಹಂತಕ್ಕೆ ಹೋಗಿದೆ.ಅತೀ ವೇಗದ ಕಾರಣ ನಿಯಂತ್ರಣ ತಪ್ಪಿದ್ದು ಸ್ಕೂಲ್ ಬಸ್ ನಲ್ಲಿ ಶಾಲಾ ಮಕ್ಕಳು ಸೇರಿದಂತೆ 30 ಜನರು ಇದ್ದರು ಎನ್ನಲಾಗಿದೆ.
ಒಂದು ವೇಳೆ ಸ್ವಲ್ಪ ಕೆಳಗೆ ಜಾರಿದ್ದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಸ್ವಲ್ಪದರಲ್ಲೇ ದೊಡ್ಡ ದುರಂತವೊಂದು ತಪ್ಪಿದೆ.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.