ತಂದೆ ತಾಯಿಯಿಲ್ಲದ ಕೊರಗಿನಿಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯುವಕ ವೀರೇಶ್ (21) ಅಡಕೆ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವೆಂದ್ರಪ್ಪ ಎಂಂಬುವವರ ಅಡಕೆ ತೋಟದ ಅಂಚಿನಲ್ಲಿರುವ ಮಾವಿನ ಮರಕ್ಕೆ ಒಂದು ಬಿಳಿ ಪಂಚೆಯನ್ನು ಕುತ್ತಿಗೆಗೆ ಬಿಗಿದುಕೊಂಡು ಮೃತ ಪಟ್ಟಿದ್ದು, ವೀರೇಶನು ತಂದೆ-ತಾಯಿ ಇಲ್ಲದ ಕೊರಗಿನಿಂದ ಜಿಗುಪ್ಪೆಗೊಂಡಿದ್ದರು ಎನ್ನಲಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.