ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕೋಡ್ರಿಗೆ ಗ್ರಾಮದ ರೈತನೊಬ್ಬ ಸಾಲಭಾದೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಾಲುಗುಡ್ಡೆ ಗ್ರಾಮದ ಕೋಡ್ರಿಗೆ ನಿವಾಸಿ ಕೃಷ್ಣಮೂರ್ತಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಭಾನುವಾರದಂದು ಬೆಳೆಗೆ ಸಿಂಪಡಿಸಿದ್ದ ಕ್ರಿಮಿನಾಶಕವನ್ನು ಸೇವನೆ ಮಾಡಿ ಅಸ್ವಸ್ಥಗೊಂಡವರನ್ನು ಅವರ ಹೆಂಡತಿ ಮಗ ಉಪಚರಿಸಿ ತಕ್ಷಣ ಚಿಕಿತ್ಸೆಗಾಗಿ ರಿಪ್ಪನ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ ಆದರೆ ಇಂದು ಬೆಳಿಗ್ಗೆ ಚಿಕಿತ್ಸೆಯಿಂದ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
ಕೃಷಿ ಕೆಲಸಕ್ಕಾಗಿ ರಿಪ್ಪನ್ ಪೇಟೆ ಕೆನರಾ ಬ್ಯಾಂಕ್ ನಲ್ಲಿ ಸುಮಾರು ಎರಡೂವರೆ ಲಕ್ಷ ರೂ ಸಾಲ ಹಾಗೂ ಸ್ವ ಸಹಾಯ ಸಂಘದಲ್ಲಿ 60,000/- ರೂ ಸಾಲ ಹಾಗೂ ಕೈಗಡವಾಗಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಸಾಲ ಮಾಡಿಕೊಂಡಿದ್ದು, ಭತ್ತ, ಕಬ್ಬು, ಮತ್ತು ಶುಠಿ ಹಾಗೂ ಅಡಿಕೆ ಬೆಳೆ ಬೆಳೆಯುತ್ತಿದ್ದು ಈ ವರ್ಷ ಮಳೆ ಸರಿಯಾಗಿ ಬಾರದೇ ಬೆಳೆ ನಾಶವಾಗಿದ್ದು ಕೃಷಿಗಾಗಿ ಮಾಡಿಕೊಂಡ ಸಾಲವನ್ನು ಈ ವರ್ಷ ಹೇಗೆ ತೀರಿಸುವುದು ಎಂಬುದಾಗಿ ಮಾನಸಿಕವಾಗಿ ನೊಂದು ಹೆಂಡತಿ ಮಕ್ಕಳು ಮತ್ತು ಪರಿಚಯಸ್ಥರೊಂದಿಗೆ ಆಗಾಗ್ಗೆ ಹೇಳಿಕೊಂಡು ಮನಸ್ಸಿಗೆ ಬೇಸರ ಮಾಡಿಕೊಂಡಿರುತ್ತಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ 32/2023 ಕಲಂ 174 ಸಿಆರ್ ಪಿಸಿ ರೀತ್ಯಾ ಇದೊಂದು ರೈತ ಆತ್ಮಹತ್ಯೆ ಪ್ರಕರಣವೆಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.