ರಿಪ್ಪನ್‌ಪೇಟೆ : ಕರ್ನಾಟಕ ಹಿಂದೂ ಪ್ರಾಂತೀಯ ರಾಷ್ಟ್ರ ಸೇನಾ ಗಣಪತಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ –
ರಿಪ್ಪನ್‌ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟçಸೇನಾ ಸಮಿತಿಯ 56 ನೇ ವರ್ಷದ 11 ದಿನಗಳ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಮಹೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಸಿದ್ದಿವಿನಾಯಕ ದೇವಸ್ಥಾನದ ಹಿಂಭಾಗದ ತಿಲಕ್ ಮಹಾಮಂಟಪದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ್ ಪವಾರ್ ಮತ್ತು ಪ್ರಧಾನ ಕಾರ್ಯದರ್ಶಿ ಲಕ್ಷಣ ಬಳ್ಳಾರಿ ವಿವರಿಸಿದರು.
ಸೆಪ್ಟಂಬರ್ 18 ರಂದು ಸೋಮವಾರ 12.30 ಕ್ಕೆ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನಾ ಪೂಜೆ ಮತ್ತು ಪ್ರಸಾದ ವಿನಿಯೋಗ.ಸೆ.19 ರಂದು ಮಂಗಳವಾರ ರಾತ್ರಿ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.ಸೆ.20 ರಂದು ಬುಧವಾರ ರಾತ್ರಿ 8 ಗಂಟೆಗೆ `ಸಂತೃಪ್ತಿ’ ಆಂಧಕಲಾವಿದರ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ.
ಸೆ.21 ರಂದು ಗುರುವಾರ ರಾತ್ರಿ 8 ಗಂಟೆಗೆ ಕೇಡಲಸರ ಶ್ರೀಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾನ ಇವರಿಂದ `ರಾಜ ಉಗ್ರಸೇನಾ’ ಯಕ್ಷಗಾನ ಪ್ರದರ್ಶನ,
ಸೆ.22 ರಂದು ಶುಕ್ರವಾರ ರಾತ್ರಿ 8 ಗಂಟೆಗೆ `ರಸಮಂಜರಿ’ಕಾರ್ಯಕ್ರಮ,
ಸೆ.23 ರಂದು ಶನಿವಾರ ರಾತ್ರಿ 8 ಕ್ಕೆ ಶ್ರೀಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರ ಇವರಿಂದ “ಭರತನಾಟ್ಯ’ಪ್ರದರ್ಶನ,
ಸೆ.24 ರಂದು ಭಾನುವಾರ ರಾತ್ರಿ 8 ಕ್ಕೆ ತೆಕ್ಕಟ್ಟೆಯ ಓಂಕಾರ ಕಲಾವಿದರಿಂದ `ಎಷ್ಟ್ ಹೇಳಿದ್ರೂ ಆಷ್ಟೆ’ ಎಂಬ ಹಾಸ್ಯಮಯ ನಾಟಕ ಪ್ರದರ್ಶನ,
ಸೆ.25 ರಂದು ಸೋಮವಾರ ರಾತ್ರಿ 8 ಕ್ಕೆ ಹೆಸರಾಂತ ಜಾನಪದ ಆಯ್ದ ಅಹ್ವಾನಿತ ತಂಡಗಳಿAದ `ಬಳೆಕೋಲಾಟ’ಸ್ಪರ್ದೆ,
ಸೆ.26 ರಂದು ಮಂಗಳವಾರ ರಾತ್ರಿ 8ಕ್ಕೆ ಶ್ರೀವಿನಾಯಕ ಮೆಲೋಡೀಸ್’ ತಂಡದವರಿAದ ರಸಮಮಜರಿ ಕಾರ್ಯಕ್ರಮ,
ಸೆ.27 ರಂದು ಬುಧವಾರ ರಾತ್ರಿ 8 ಕ್ಕೆ ರಿಪ್ಪನ್‌ಪೇಟೆ ಕೊಪ್ಪ ಹೊಸನಗರ ವಿದ್ಯಾರ್ಥಿಗಳಿಂದ `ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್’’ ಇವರಿಂದ ನೃತ್ಯ ರೂಪಕ,
ಸೆ.28 ರಂದು ಗುರುವಾರ ಮದ್ಯಾಹ್ನ 12.30 ಕ್ಕೆ ಶ್ರೀ ಸ್ವಾಮಿಯ ವಿಸರ್ಜನಾ ಪೂಜೆ ನಮತರ ಸಂಜೆ 4 ಗಂಟೆಗೆ ಶ್ರೀಸ್ವಾಮಿಯ ವಿಸರ್ಜನಾ ಮೆರವಣಿಗೆ ರಾಜಬೀದಿ ಉತ್ಸವ ಈ ರಾಜಬೀದಿ ಉತ್ಸವದಲ್ಲಿ ವಿಶೇಷ ವಾದ್ಯ ಡೋಳ್ಳುಕುಣಿತ ತಮಟೆ ಬಡಿತ ವಿವಿಧ ಗ್ರಾಮಗಳ ಜಾನಪದ ತಂಡದವರ ಭಜನೆ ಈ ವರ್ಷದ ವಿಶೇಷ ಅಕರ್ಷಣೆ ಭದ್ರಾವತಿ ಅರಕೆರೆ ವೀರಗಾಸೆ ಶಿಗ್ಗಾಂವ್ ಜಾಂಜಾ ಪಥಾಕ್, ಕೀಲುಕುದುರೆ,ಗೊಂಬೆಕುಣಿತ,ನಗಾರಿ ತಟ್ಟಿರಾಯ ತಂಡದವರ ಕಲಾ ಪ್ರದರ್ಶನಗೊಳ್ಳಲಿದೆ.ಇದರೊಂದಿಗೆ ರಾತ್ರಿ 10-30 ರಿಂದ ವಿನಾಯಕ ವೃತ್ತದಲ್ಲಿ ಶಿವಮೊಗ್ಗ `ಗೀತಾ ಅರ್ಕೇಸ್ಟಾ’ ತಂಡದವರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನಾಶೀರ್ವಾದ ಪಡೆಯುವಂತೆ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್