ರಿಪ್ಪನಪೇಟೆ : ರಾಜ್ಯ ಸರ್ಕಾರದ ಸಾಮಾನ್ಯ ವರ್ಗಾವಣೆ ಅನ್ವಯ ರಾಜ್ಯಾದ್ಯಂತ 50 ಪಿಎಸ್ಐ ಗಳನ್ನು ವರ್ಗಾವಣೆ ಗೊಳಿಸಿ ಆದೇಶ ಮಾಡಿದೆ.
ರಿಪ್ಪನ್‌ಪೇಟೆ ಪಿಎಸ್ಐ ಶಿವಾನಂದ ಕೋಳಿ ರವರನ್ನು ಹೊಸನಗರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಪ್ರಸ್ತುತ ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಎಸ್ ಪಿ ರವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೊಸನಗರದಲ್ಲಿ ಕಾರ್ಯನಿರ್ವಹಿಸುತಿದ್ದ ನೀಲಪ್ಪ ನರಲಾರ ರವರನ್ನು ಹಿರೇಕೆರೂರು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ವರ್ಗಾವಣೆಗೊಳಿಸಲಾಗಿದೆ.



