Headlines

ರಿಪ್ಪನ್‌ಪೇಟೆ : ಚಲನಚಿತ್ರ ನಟ ದರ್ಶನ್ ಭೇಟಿಗಾಗಿ ಪರಿತಪಿಸಿ ಖಿನ್ನತೆಗೊಳಗಾದ ಮತ್ತಿಕೊಪ್ಪದ ಯುವಕ ಸುದೀಪ್|DBOSS

ರಿಪ್ಪನ್‌ಪೇಟೆ;-ಚಿತ್ರ ನಟ ದರ್ಶನ್ ತೂಗುದೀಪ್ ದರ್ಶನಕ್ಕಾಗಿ ಹಗಲಿರುಳು ಪರಿತಪ್ಪಿಸುತ್ತಾ ಖಿನ್ನತೆಗೊಳಗಾದ  ಅಭಿಮಾನಿ ಮಲೆನಾಡಿನ ಕುಗ್ರಾಮ ಮತ್ತಿಕೊಪ್ಪದ ಯುವಕ ಸುದೀಪ್.

ಚಿತ್ರ ನಟ ದರ್ಶನರವರ ಸಾರಥಿ, ಅರ್ಜುನ ಐಪಿಎಸ್,ನವಗ್ರಹ, ಸ್ವಾಮಿ, ಹೀಗೆ ಅವರು ನಟಿಸಿರುವ ಹಲವು ಚಿತ್ರಗಳನ್ನು ನೋಡಿ ಅಕರ್ಷಿತನಾದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತ್ತಿಕೊಪ್ಪ ವಾಸಿ ಬಡಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ ಇಪ್ಪತ್ನಾಲ್ಕು ವರ್ಷದ ಸುದೀಪ್ ಚಿತ್ರನಟ ದರ್ಶನ್ ದರ್ಶನಕ್ಕಾಗಿ ಹಾತೊರೆಯುತಿದ್ದಾನೆ.

ಚಿಕ್ಕಂದಿನಿಂದಲೇ ದರ್ಶನ್ ಬಗ್ಗೆ ಅಪಾರ ಅಭಿಮಾನವನ್ನಿಟ್ಟು ಕೊಂಡಿರುವ ಸುದೀಪ ದರ್ಶನ್ ರವರನ್ನು ಹಲವು ಬಾರಿ ಭೇಟಿ ಮಾಡಲು ಪ್ರಯತ್ನಿಸಿ ವಿಫಲನಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿ ಈಗ ಮಣಿಪಾಲ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತಿದ್ದಾನೆ.

ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ  ಅರನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ  ಚಿತ್ರನಟ ದರ್ಶನರವರ  ಅಪ್ಪಟ ಅಭಿಮಾನಿಯಾಗಿ ದರ್ಶನ ನಟಿಸಿರುವ ಹಲವು ಚಿತ್ರಗಳನ್ನು ನೋಡುವುದರೊಂದಿಗೆ ಖಿನ್ನತೆಗೊಳ್ಳಗಾಗಿ ಮಣಿಪಾಲ ಅಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಹೀಗೆ ಶಿವಮೊಗ್ಗ ಅಸ್ಪತ್ರೆಯಲ್ಲಿ ಮಾನಸಿಕ ರೋಗದ ಚಿಕಿತ್ಸೆ ಪಡೆಯುತ್ತಿರುವ ಈ ಯುವ ಅಭಿಮಾನಿ ನಟನ ದರ್ಶನಕ್ಕಾಗಿ ಮನೆ ಬಿಟ್ಟು ಗಂಟೂ ಮೂಟೆ ಕಟ್ಟಿಕೊಂಡು ಬೆಂಗಳೂರಿನ ದರ್ಶನ್ ರವರ ತೂಗುದೀಪ ನಿವಾಸದ ಮನೆಬಾಗಿಲಿಗೆ ಹೋದರೂ ದರ್ಶನ್ ರನ್ನು ನೋಡುವ ಭಾಗ್ಯ ದೊರಕುತ್ತಿಲ್ಲ ಎಂದು ತನ್ನ ಮನದಾಳದ ನೋವಯನ್ನು ಮಾಧ್ಯಮದವರ ಬಳಿ ಹಂಚಿಕೊಂಡಿದ್ದಾರೆ.


ತಂದೆ ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿರುವ 24 ವರ್ಷದ ಸುದೀಪ್ ರವರ ಹುಚ್ಚು ಅಭಿಮಾನದ ಬಗ್ಗೆ ತಿಳಿದು ಈ ಬಗ್ಗೆ ವರದಿ ಮಾಡಲು ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಸುದೀಪನ ಅತ್ತೆಯ ಮನೆಯಿರುವ ಹುಂಚ ಸಮೀಪದ ಕುಬಟಹಳ್ಳಿಗೆ ತೆರಳಿ ಮಾತನಾಡಿಸಿದಾಗ ನನಗೆ ದರ್ಶನ್ ಎಂದರೇ ಪಂಚಪ್ರಾಣ,ಅವರು ಉತ್ತಮವಾಗಿ ನಟಿಸುತ್ತಾರೆ ಚಾಲೇಜಿಂಗ್ ಸ್ಟ್ರಾರ್ ಬಿರುದು ಇರುವಂತೆ ಚಾಲೆಂಜಿಗ್ ಆಗಿ ಇದ್ದಾರೆ ಅವರನ್ನು ನೋಡಲು ಹಲವಾರು ಬಾರಿ ಮನೆಯವರಿಗೂ ತಿಳಿಸದೇ ಓಡಿ ಹೋಗಿ ಬೆಂಗಳೂರು ರೈಲು ಹತ್ತಿ ನಟ ದರ್ಶನರವರ ಬೆಂಗಳೂರು ಮನೆ ಹತ್ತಿರ ಹೋದರೆ ಅವರನ್ನು ನೋಡಲು ವಾಚಮನ್ ಒಳ ಬಿಡದೇ ಗೇಟ್ ಬಳಿ ನಿಲ್ಲಿಸಿ ಊರಲ್ಲಿಲ್ಲ ಎಂದು ಹೇಳಿ ಕಳುಹಿಸುತ್ತಾರೆ ಎನ್ನುತ್ತಾನೆ ಸುದೀಪ್.

ಅದರೂ ಬೆನ್ನತ್ತಿದ ಬೇತಾಳನಂತೆ ನಾನು ಮರಣ ಹೊಂದುವ ಮುನ್ನವೇ ನನಗೆ ದರ್ಶನ ನೋಡಬೇಕು ಎಂದು ಮನೆಯವರಿಗೆ ಒತ್ತಡ ಹಾಕುತ್ತಿದ್ದು ಅವನ ಅಸೆಗೆ ತಣ್ಣಿರು ಎರಚಬಾರದೆಂದು ಕೊನೆಗೆ ಬೇರೆ ಮಾರ್ಗವಿಲ್ಲದೆ ಇಂದು ಮಾದ್ಯಮದ ಮೂಲಕ ದರ್ಶನ್ ದರ್ಶನಕ್ಕೆ ಅವಕಾಶ ಮಾಡಿಕೊಡುವರೆಂಬ ಆಶಾಭಾವನೆಯಿಂದ ತಮ್ಮ ಮಗನ ಬೇಡಿಕೆಯನ್ನ ಈಡೇರಿಸುವಲ್ಲಿ ಯಶಸ್ವಿಯಾಗುವರೆಂಬ ಅಶೋತ್ತರದಲ್ಲಿ ತಾಯಿ ತಾರಾ ಹಂಬಲಿಸಿದ್ದು ಹೀಗೆ………..!

ಒಟ್ಟಾರೆಯಾಗಿ ತನ್ನ ಮಗನ ಖಿನ್ನತೆಯನ್ನು ಪರಿಹರಿಸಲು ಚಿತ್ರನಟ ದರ್ಶನ ಮೊಬೈಲ್ ನಂಬರ್ ನೀಡಿದರೆ ಅದರ ಮೂಲಕ ನೇರವಾಗಿ ಮಾತನಾಡುವಂತಾಗಿ ಭೇಟಿಯ ದಿನವನ್ನು ತಿಳಿಸುವಂತಾಗಲಿ ಎಂಬುದೇ ತಾಯಿ ತಾರಾ ಮತ್ತು ಪೋಷಕವರ್ಗದ  ಅಶಯವಾಗಿದೆ………!

Leave a Reply

Your email address will not be published. Required fields are marked *

Exit mobile version