ರಿಪ್ಪನ್‌ಪೇಟೆ : ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನ ಹಾಗೂ ರಿಪ್ಪನ್‌ಪೇಟೆಯ ಗುಡ್‌ಶಫರ್ಡ್ ಚರ್ಚ್ ಗೆ ಇಂದು ಬೆಳಗ್ಗೆ ಭೇಟಿ ನೀಡಿ ಧರ್ಮ ಗುರುಗಳ ದರ್ಶನಾಶೀರ್ವಾದ ಪಡೆದರು.
ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಅಭ್ಯರ್ಥಿ ಗೋಪಾಲಕೃಷ್ಣರವರಿಗೆ ಶುಭಹಾರೈಸಿ ತಾವು ಜನರ ಸಂಕಷ್ಟವನ್ನು ಪರಿಹರಿಸುವ ಮೂಲಕ ಮತದಾರರಲ್ಲಿ ಪ್ರೀತಿ ವಿಶ್ವಾಸಗಳಿಸಿ ನಿಮಗೆ ಮುಂದೆ ಒಳ್ಳಯ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಿಪ್ಪನ್ ಪೇಟೆ ಪಟ್ಟಣದ ಗುಡ್ ಶೇಫೇರ್ಡ್ ಚರ್ಚಿನ ಧರ್ಮ ಗುರು ರೇವರೆಂಡ್ ಫಾದರ್ ಬಿನೋಯ್ ರವರ ಶುಭ ಆಶೀರ್ವಾದ ಪಡೆದರು.ನಂತರ ಚರ್ಚಿನ ಹೊರಭಾಗದಲ್ಲಿ ಕ್ರೈಸ್ತ ಬಾಂಧವರ ಬಳಿ ಮತಯಾಚಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗೋಪಾಲಕೃಷ್ಣ ಬೇಳೂರು ಸಾಗರ-ಹೊಸನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ.ಚುನಾವಣೆಯಲ್ಲಿ ನನ್ನದೇ ಗೆಲುವು ಎಂಬ ವಾತವರಣ ಸೃಷ್ಟಿಯಾಗಿದೆ.
ನಮ್ಮ ಪಕ್ಷದ ಗ್ಯಾರಂಟಿ ಕಾರ್ಡ್ ಈಗಾಗಲೇ ಮನೆಮನಸ್ಸು ತಲುಪಿ ಈ ಐದು ಪ್ರಣಾಳಿಕೆಗಳು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆ ಯಾಗಿದ್ದು ಹಣ ಈ ಭಾರಿ ಚಲಾವಣೆಯಾಗದೇ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು ಹೇಳಿದಂತೆ ಹಣಪಡೆದು ಮತವನ್ನು ಒಳ್ಳೆಯ ವ್ಯಕ್ತಿಗೆ ಚಲಾಯಿಸಿ ಎಂದಿರುವುದು ನನ್ನ ಗೆಲುವಿಗೆ ಶಕ್ತಿ ಬಂದಂತಾಗಿದೆ ಎಂದು ಹೇಳಿದ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ದುರಹಂಕಾರಿ ಶಾಸಕ ಹರತಾಳು ಹಾಲಪ್ಪರನ್ನು ಕ್ಷೇತ್ರದ ಜನತೆ ಸೋಲಿಸಲಿದ್ದಾರೆ. ಪ್ರತಿನಿತ್ಯ ಬಿಜೆಪಿ ಪಕ್ಷದ ನೂರಾರು ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ಗೆಲುವಿನ ಸಂಕೇತವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್,ತಾಲ್ಲೂಕ್ ಪ್ರಚಾರ ಸಮಿತಿ ಅಧ್ಯಕ್ಷ ಜಯಶೀಲಪ್ಪಗೌಡ ಹರತಾಳು,ಎಪಿಎಂಸಿ .ಹಾರೋಹಿತ್ತಲು ಈಶ್ವರಪ್ಪಗೌಡ, ಪಕ್ಷದ ಮುಖಂಡರಾದ ಹಕ್ರ ಮಲ್ಲಿಕಾರ್ಜುನ, ಡಿ.ಈ.ಮಧುಸೂದನ್,ಅಸೀಫ್ ಭಾಷಾಸಾಬ್, ಎನ್.ಚಂದ್ರೇಶ್, ಆರ್.ಹೆಚ್.ಶ್ರೀನಿವಾಸ್,ರವಿ ಕೆರೆ ಹಳ್ಳಿ ,ಎಂ. ಎಂ ಪರಮೇಶ, ಫ್ಯಾನ್ಸಿ ರಮೇಶ್, ಕೌಶಿಕ್,ವರ್ಗೀಸ್,ಉಲ್ಲಾಸ ತೆಂಕೋಲ,ಬಿ ಎಸ್ ಎನ್ ಎಲ್ ಶ್ರೀಧರ್. ಆಟೋ ಗಫುರ್ ಧನಲಕ್ಷಿö್ಮ, ಸಾರಾಬಿ. ಲೇಖನ, ದೀಪಾ ನಾಗರಾಜ್ ಇನ್ನಿತರರು ಹಾಜರಿದ್ದರು.



