Headlines

ರಿಪ್ಪನ್‌ಪೇಟೆ : ಪ್ರತಾಪನಿಂದ ಯುವಕನ ಮೇಲೆ ಹಲ್ಲೆ – ಪ್ರಕರಣ ದಾಖಲು|assault

ರಿಪ್ಪನ್‌ಪೇಟೆ : ಸಮೀಪದ ವಡಗೆರೆಯ ಪ್ರತಾಪ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಮತ್ತೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.




ಘಟನೆಯ ಹಿನ್ನಲೆ:

ಶುಕ್ರವಾರ ತಡರಾತ್ರಿ ವಡಗೆರೆ ನಿವಾಸಿ ಭರತ್ ಸಿಂಗ್ ಎಂಬಾತನು
ಮನೆಯಲ್ಲಿ ಊಟಮಾಡಿಕೊಂಡು ತನ್ನ ಸ್ನೇಹಿತ ಬಾಲಾಜಿರವರ ಶುಂಠಿ ಕಾಯಲು ಮನೆಯ ಮುಂಭಾಗ ಹೋಗುತ್ತಿದ್ದಾಗ ಭರತ್ ಬೈಕ್ ಹತ್ತಿರ ಪ್ರತಾಪ್ ಸಿಂಗ್ ನಿಂತಿದ್ದು, ಯಾರು ಎಂದು ಕೇಳಿದ್ದಕೆ ಪ್ರತಾಪ್ ಸಿಂಗ್ ಏಕಾಏಕಿ ಭರತ್ ಮೇಲೆ ಅವಾಚ್ಯವಾಗಿ ನಿಂದಿಸಿ ಕೈಗಳಿಂದ ಹೊಡೆದು ನಂತರ ಅಲೆ ಇದ್ದ ದೊಣ್ಣೆಯಿಂದ ಭರತ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಭರತ್ ಸಿಂಗ್ ಜೋರಾಗಿ ಕೂಗಿ ಕೊಂಡಿದ್ದರಿಂದ ತಾಯಿ ಮತ್ತು ಸ್ಥಳೀಯರು ಬಂದಿದ್ದಾರೆ. ಈ ಸಂಧರ್ಭದಲ್ಲಿ ಭರತ್ ಸಿಂಗ್ ಗೆ ಜೀವಬೆದರಿಕೆ ಹಾಕಿ ಪ್ರತಾಪ್ ಓಡಿಹೋಗಿದ್ದಾನೆ.




ನಂತರ ಭರತ್ ಸಿಂಗ್ ತಾಯಿ ಮತ್ತು ಸ್ಥಳೀಯರು ಗಂಭೀರ ಗಾಯಗೊಂಡಿದ್ದ ಭರತ್ ನನ್ನು ರಿಪ್ಪನಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ನಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.

ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Reply

Your email address will not be published. Required fields are marked *

Exit mobile version