Headlines

ಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ – ಘಟನೆಯಿಂದ ನೋವಾಗಿದೆ ,ಯಾರನ್ನು ಬಂಧಿಸಬೇಡಿ : ಯಡಿಯೂರಪ್ಪ|Bsy

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ತಮ್ಮ ಮನೆ ಮೇಲೆ ನಡೆದ ಕಲ್ಲೂ ತೂರಾಟದ ಘಟನೆಯ ಬಗ್ಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.




ಯಾರನ್ನು ಬಂಧಿಸಬೇಡಿ!

ಬಂಜಾರ ಸಮುದಾಯದ ಕಾರ್ಯಕರ್ತರು ನಮ್ಮ ಮನೆಗೆ ಹಲ್ಲೆ ಮಾಡಿ, ಕಲ್ಲು ತೂರಾಟ ಮಾಡಿದಂತಹ ಘಟನೆಗಳು ನಡೆದಿವೆ. ಈ ಸಂಬಂಧ ಎಸ್​ಪಿ ಮತ್ತು ಡಿಸಿಯವರ ಬಳಿಯಲ್ಲಿ ಮಾತನಾಡಿ, ಬಂಜಾರ ಸಮುದಾಯದವರು ನಮ್ಮ ಜೊತೆ ಇದ್ದಾರೆ. ತಾಂಡಗಳ ಅಭಿವೃದ್ಧಿ ಮಾಡಿದ್ದೇನೆ, ತಪ್ಪು ಗೃಹಿಕೆಯಿಂದ ಈ ಘಟನೆ ಯಾಗಿದೆ. ಯಾರ ವಿರುದ್ಧವೂ ಕ್ರಮ ಕೈಗೊಳ್ಳದೇ ಶಾಂತಿಯುತವಾಗಿ ಅವರನ್ನು ಕಳುಹಿಸಿಕೊಡಬೇಕು, ಅವರನ್ನ ಬಂಧನ ಮಾಡದೇನೆ ಅವರನ್ನ ಕಳುಹಿಸಿಕೊಡಬೇಕು ಎಂದು ತಿಳಿಸಿದ್ದೇನೆ ಎಂದು ಬಿಎಸ್​ ಯಡಿಯೂರಪ್ಪ ಹೇಳಿದ್ಧಾರೆ.




ಈ ಪ್ರತಿಭಟನೆ ಹಾಗೂ ಅದರ ಬೆನ್ನಲ್ಲೆ ನಡೆದ ಘಟನೆಯಲ್ಲಿ ಯಾರ ಕೈವಾಡ ಇದೆ ಎಂಬುದು ನನಗೆ ಗೊತ್ತಿಲ್ಲ, ನನಗೆ  ಆ ರೀತಿ ಕಾಣುತ್ತಿಲ್ಲ. ತಪ್ಪು ಗೃಹಿಕೆಯಿಂದ ಈ ರೀತಿಯ ಘಟನೆ ಆಗಿಬರಹುದು. ಬಂಜಾರ ಸಮುದಾಯದ ಮುಖಂಡರ ಜೊತೆಗೆ ಈ ಬಗ್ಗೆ ಸಮಾಲೋಚನೆ ಮಾಡುತ್ತೇನೆ. ಅವರ ಸಮಸ್ಯೆಗಳು ಏನೇ ಇದ್ದರೂ ನಮ್ಮೊಂದಿಗೆ ಅವರು ಬಂದು ಚರ್ಚಿಸಲಿ ಇದಕ್ಕೆ ನಾನು ವಿಜಯೇಂದ್ರರವರು ಸಿದ್ದರಿದ್ದೇವೆ ಎಂದಿದ್ಧಾರೆ.

ಕಾನೂನು ಕೈಗೆತ್ತಿಕೊಳ್ಳುವುದು ಶಿಕಾರಿಪುರದ ಗುಣವಲ್ಲ
ನ್ಯಾಯುಯುತವಾಗಿ ಹೋರಾಟ ಮಾಡುವುದು ಶಿಕಾರಿಪುರದ ಜನತೆಯ ಗುಣವಾಗಿದೆ. ಈ ರೀತಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಅಲ್ಲಿಯ ಗುಣವಲ್ಲ ಮತ್ತು ತರವಲ್ಲ. ನಾಲ್ಕು ಸಲ ಸಿಎಂ ಆಗಲು ಕಾರಣವಾಗಿದ್ದು ಜೊತೆಗಿದ್ದು ಸಹಕರಿಸಿದ್ದು ಬಂಜಾರ ಸಮುದಾಯದವರು, ನಾನು ಸಹ ಅವರ ಅಭಿವೃದ್ಧಿಗೆ ದುಡಿದಿದ್ದೇನೆ. ನಾಳೆ ನಾಡಿದ್ದರಿಂದ ಶಿಕಾರಿಪುರಕ್ಕೆ ಹೋಗಿ, ಅಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದಿದ್ಧಾರೆ.

ಯಾವುದೇ ಸಂದರ್ಭದಲ್ಲಿ ಬಂಜಾರ ಸಮುದಾಯದ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿಯವರನ್ನ ಭೇಟಿ ಮಾಡಬಹುದು. ಅವರಿಗೆ ಅವಶ್ಯಕತೆ ಇದ್ದರೆ ನಾನು ಸಹ ಸಿಎಂ ಭೇಟಿಗಾಗಿ ಜೊತೆಯಲ್ಲಿ ಬರುತ್ತೇನೆ. ಘಟನೆ ಸಂಬಂಧ ಯಾರನ್ನು ದೂರುವುದಿಲ್ಲ, ಘಟನೆ ಸಂಬಂಧ ಯಾರ ಕೈವಾಡ ಇದೆ ಇಲ್ಲ ಎನ್ನುವುದರ ಬಗ್ಗೆ ತಪ್ಪು ಗೃಹಿಕೆಯಿಂದ ಹೇಳಿಕೆ ನೀಡುವುದು ಬೇಡ, ಇಂತಹ ಘಟನೆಗಳು ಆದಾಗ, ಯಾರು ಮಾಡಿದ್ದು ಎಂದು ಅನುಮಾನ ಪಡುವುದು ಸಹಜ. ಆದರೆ ಈ ಬಗ್ಗೆ ನಾನು ಯಾರನ್ನು ದೂರುವುದಿಲ್ಲ. ಎನೋ ತಪ್ಪು ಗೃಹಿಕೆಯಿಂದ  ಘಟನೆ ನಡೆದಿರಬಹುದು ಎಂದಿದ್ದಾರೆ.




ಸಹಜವಾಗಿಯೇ ನೋವಾಗುತ್ತದೆ.

ಬಂಜಾರದ ಸಮುದಾಯದ ಅಭಿವೃದ್ಧಿ ಸಾಕಷ್ಟು ಕೆಲಸ ಮಾಡಿದ್ದೇನೆ, ಶಿಕಾರಿಪುರದ ಅಭಿವೃದ್ಧಿಗಾಗಿ ದುಡಿದಿದ್ದೇನೆ, ಸಹಜವಾಗಿಯೇ ನನ್ನ ಮನೆ ಮೇಲೆ ದಾಳಿ ನಡೆದಾಗ ನೋವಾಗುತ್ತದೆ. ಆದರೆ ನಡೆದ ಘಟನೆ ಬಗ್ಗೆ ಅಲ್ಲಿನ ಮುಖಂಡರ ಜೊತೆ ಮಾತನಾಡುತ್ತೇನೆ. ನಾಳೆ ನಾಡಿದ್ದು ಶಿಕಾರಿಪುರಕ್ಕೆ ಹೋಗಿ ಅಲ್ಲಿ ಪ್ರತಿಭಟನೆಯಲ್ಲಿದ್ದ ನಾಯಕರ ಜೊತೆಗೆ ಮಾತನಾಡುತ್ತೇನೆ ಎಂದ ಬಿಎಸ್​ವೈ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ತಮ್ಮ ಪಕ್ಷ ಬಿಜೆಪಿ ನಾಯಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಊರಿಗೆ ಹೋಗಿ ಮಾತನಾಡಿ ಚರ್ಚೆ ಮಾಡಿ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತೇವೆ ಎಂದರು.



Leave a Reply

Your email address will not be published. Required fields are marked *

Exit mobile version