Headlines

ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ ಮೆಚ್ಚುಗೆಗೆ ಬಿಜೆಪಿ ಪಾತ್ರವಾಗುತ್ತಿದೆ – ಗೃಹ ಸಚಿವ ಆರಗ ಜ್ಞಾನೇಂದ್ರ|BJP

ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ  ಮೆಚ್ಚುಗೆಗೆ ಬಿಜೆಪಿ ಪಾತ್ರ ಆಗುತ್ತಿದೆ – ಗೃಹಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಅತ್ಯಂತ ಸಂತೋಷದಾಯಕವಾದ ದಿನ, ನಮ್ಮ ಇಶಾನ್ಯ ರಾಜ್ಯಗಳಲ್ಲಿ ಮೂರು ರಾಜ್ಯದಲ್ಲಿ ಚುನಾವಣೆ ನೆಡೆದಿತ್ತು. ಇಂದು ಫಲಿತಾಂಶ ಹೊರ ಬಂದಿದೆ. ಮೂರರಲ್ಲಿ ಎರಡು ಸ್ಪಷ್ಟ ಬಹುಮತವನ್ನು ಪಡೆದು ತನ್ನ ರಾಜ್ಯಭಾರ ಮಾಡಲು ಸಜ್ಜಾಗಿದೆ. ಇನ್ನೊಂದು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.




ಗುರುವಾರ ಕೊಪ್ಪ ಸರ್ಕಲ್ ನಲ್ಲಿ ಕಾರ್ಯಕರ್ತರ ಜೊತೆ ಸಂಭ್ರಮ ಆಚರಿಸಿ ಮಾತನಾಡಿದ ಅವರು ಈ ದೇಶದ ಉದ್ದಗಲಕ್ಕೆ ಎಲ್ಲಾ ರಾಜ್ಯಗಳಲ್ಲೂ ಅಧಿಕಾರಕ್ಕೆ ಬರುವ ಶಕ್ತಿ ಬಿಜೆಪಿಯನ್ನು ಹೊರತು ಪಡಿಸಿ ಮತ್ಯಾವ ಪಕ್ಷಕ್ಕೂ ಇಲ್ಲ. ಬಿಜೆಪಿ ಎಲ್ಲಾ ರಾಜ್ಯಗಳಲ್ಲೂ ನೆಲೆಯೂರಿದೆ. ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲರ ಒಪ್ಪಿಗೆಗೆ, ಮೆಚ್ಚುಗೆಗೆ ಬಿಜೆಪಿ ಪಾತ್ರ ಆಗುತ್ತಿದೆ ಅದು ನೆಮ್ಮದಿ ತರುವಂತಹ ವಿಚಾರ ಎಂದರು.


ಮೂರು ರಾಜ್ಯಗಳಲ್ಲಿ ಕೆಲವು ಕಡೆಯಲ್ಲಿ ಖಾತೆಯನ್ನೇ ತೆರೆದಿಲ್ಲ. ಎಲ್ಲೂ ನೆಲೆ ಇಲ್ಲದೆ ತನ್ನ ನೆಲೆಯನ್ನು ಕಳೆದುಕೊಂಡು ಅನಾಥ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಬಿಜೆಪಿ ಎಲ್ಲಾ ದಿಕ್ಕಿನಲ್ಲೂ ತನ್ನ ಹೆಜ್ಜೆ ಗುರುತನ್ನು ಮೂಡಿಸುತ್ತ ತನ್ನ ಶಕ್ತಿಯನ್ನು ವೃದ್ಧಿ ಮಾಡಿಕೊಂಡಿದೆ. ನರೇಂದ್ರ ಮೋದಿಯವರ ದೇಶದ ಆಳ್ವಿಕೆ ಈ ದೇಶದ ಮೂಲೆ ಮೂಲೆಗೆ ತಲುಪಿ ಜನರ ಒಪ್ಪಿಗೆ ಪಡೆದಿದೆ. ಈ ಜಗತ್ತಿನಲ್ಲಿ ರಾಷ್ಟ್ರವನ್ನು, ಭಾರತವನ್ನು  ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿರುವ ಮೋದಿಯವರ ಶಕ್ತಿ ಮತ್ತು ಪ್ರತಿಮೆ ಎಲ್ಲರ ಹೃದಯದಲ್ಲಿ ನೆಲೆಯೂರಿದೆ ಎಂದರು.




ಇಶಾನ್ಯ ರಾಜ್ಯಗಳ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದೆ.ಈ ದೇಶದಿಂದ ಕೈ ಬಿಟ್ಟು ಹೋಗುತ್ತವೆ ಎನ್ನುವ ಪರಿಸ್ಥಿತಿ ಇತ್ತು. ವಿದೇಶಿ ಮಿಷನರಿಗಳ ಹಾವಳಿ. ಇವತ್ತು ಅಲ್ಲಿರುವ ಗುಡ್ಡ ಗಾಡುಗಳನ್ನು ಅಳಿಸಿ ಹಾಕಿ ಭಾರತೀಯರೇ ಅಲ್ಲ, ಭಾರತ ಎಂದರೆ ಒಂದು ವಿದೇಶ ಅಂತ ತಿಳಿದುಕೊಂಡಿದ್ದ ಜನರ ಮನಸಿನಲ್ಲಿ ಇವತ್ತು ನಾವು ಭಾರತೀಯರು, ಭಾರತದ ಅವಿಭಾಜ್ಯ ಅಂಗ ಅಂತ ಹೇಳುವ ಮಾನಸಿಕತೆಯನ್ನ ಬಿಜೆಪಿ ಮತ್ತು ಅಲ್ಲಿರುವ ಕಾರ್ಯಕರ್ತರು ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಅಲ್ಲಿನ ಬಿಜೆಪಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕರ್ನಾಟಕ ದಲ್ಲಿ ಬರುವ ಚುನಾವಣೆಯಲ್ಲೂ ಕೂಡ ಅದೇ ರೀತಿಯಲ್ಲಿ ಬಿಜೆಪಿ ಪಕ್ಷದ ಭಾವುಟ ಹಾರಲಿ ಎನ್ನುವ ಸಂಕಲ್ಪ ತೋಡೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.



Leave a Reply

Your email address will not be published. Required fields are marked *

Exit mobile version