Headlines

ಜೀವನದಲ್ಲಿ ಜಿಗುಪ್ಸೆಗೊಂಡ ರಿಪ್ಪನ್‌ಪೇಟೆಯ ಆಟೋ ಚಾಲಕ ಕಳೆನಾಶಕ ಸೇವಿಸಿ ಸಾವು|crime news

ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳಕೋಡು ಗ್ರಾಮದಲ್ಲಿ ನಡೆದಿದೆ.




ಬೆಳಕೋಡು ನಿವಾಸಿ ಬಿನೋಯ್ ಸ್ಕರಿಯಾ(52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.

ರಿಪ್ಪನ್‌ಪೇಟೆ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಆಟೋ ಚಾಲಕನಾಗಿದ್ದ ಬಿನೋಯ್ ಸ್ಕರಿಯಾ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.ಆಟೋ ಓಡಿಸುವುದನ್ನು ಒಂದು ವರ್ಷದಿಂದ ನಿಲ್ಲಿಸಿದ್ದರು.ಅವರು ನಿನ್ನೆ ರಾತ್ರಿ ಬೆಳಕೋಡು ಗ್ರಾಮದಲ್ಲಿರುವ ಮನೆಯಲ್ಲಿ ಕಳೆನಾಶಕ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು.

ಈ ವೇಳೆ ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.




ಮರಣೋತ್ತರ ಪರೀಕ್ಷೆ ನಡೆಸಿ‌ ಮೃತದೇಹವನ್ನು ಬೆಳಕೋಡು ಗ್ರಾಮದ ಅವರ ಮನೆಯಲ್ಲಿ ತಂದಿರಿಸಲಾಗಿದ್ದು ನಾಳೆ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆಯ ಕಳಕಳಿ


ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ – ಒಂದು ಕ್ಷಣ ನಿಮ್ಮ ಕುಟುಂಬ ಹಾಗೂ ನೆಚ್ಚಿನವರನ್ನು ನೆನೆದಲ್ಲಿ ನಿಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೇ ಮರೆಯಾಗಬಹುದು.

ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ- ಯಾವುದೇ ಸಮಸ್ಯೆ ಇದ್ದಲ್ಲಿ ಸರ್ಕಾರದ ಈ ಸಹಾಯವಾಣಿಗೆ ಕರೆ ಮಾಡಿ.

ಸಹಾಯವಾಣಿ ನಂಬರ್ : 080 – 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.



Leave a Reply

Your email address will not be published. Required fields are marked *

Exit mobile version