ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯೇ ಪ್ರಿಯಕರನನ್ನು ಹತ್ಯೆಗೈದಿರುವ ಘಟನೆ ನಡೆದಿದೆ.
ಹಾಸನ ಮೂಲದ ಪರ್ವೇಜ್ ಖಾನ್ ಎಂಬ ವ್ಯಕ್ತಿಯ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗುತಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.
ಹಾಸನದ ಚನ್ನರಾಯಪಟ್ಟಣದ ಮೂಲದ ಆಯಿಷಾ ಮತ್ತು ಜಾವಗಲ್ ಮೂಲದ ಪರ್ವೇಜ್ ಖಾನ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಇವರಿಬ್ಬರ ಸಂಬಂಧದ ವಿಚಾರಕ್ಕೆ ಮನನೊಂದಿದ್ದ ಆಯಿಷಾ ಳ ಪತಿ ಇವಳನ್ನು ಬಿಟ್ಟು ದೂರ ಉಳಿದಿದ್ದ ಎನ್ನಲಾಗುತ್ತಿದೆ.
ನಿನ್ನೆಯ ದಿನ ರಾತ್ರಿ ಪರ್ವೇಜ್ ಹಾಗೂ ಆಯಿಷಾ ಭದ್ರಾವತಿಗೆ ಬಂದು ಹೆರಿಟೇಜ್ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದಾರೆ. ನಿನ್ನೆ ರೂಮ್ನಲ್ಲಿ ಆಯೇಶಾ ಹಾಗೂ ಪರ್ವೇಜ್ ನಡುವೆ ಜಗಳವಾಗಿದೆ.
ಈ ವೇಳೆ ಪರ್ವೇಜ್ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಳಿಕ ರೂಮಿನಿಂದ ಆಯೇಶಾ ವಾಪಸ್ ತೆರಳಿದ್ದಾಳೆ.
ಮೂಲಗಳ ಪ್ರಕಾರ ಪ್ರೇಯಸಿ ಹಾಸನದಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ಸದ್ಯ ಸ್ಥಳಕ್ಕೆ ಓಲ್ಡ್ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸ್ತಿದ್ದಾರೆ.