ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೊದಲ ದಿನವಾದ ಇಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ್ಯ ಪ್ರಮುಖರೊಂದಿಗೆ ಸಭೆ ನಡೆಸಿದ ಬಳಿಕ ಅನಾರೋಗ್ಯದಿಂದ ಮೃತಪಟ್ಟ ಆರ್‌ಎಸ್‌ಎಸ್ ಪ್ರಮುಖ ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಗರದ ಹೊನ್ನಾಳಿ ರಸ್ತೆಯಲ್ಲಿರುವ ಶುಭಶ್ರೀ ಕಲ್ಯಾಣ ಮಂಟಪದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ 50 ಜನರ ಪ್ರಮುಖರ ಸಭೆ ನಡೆದಿದೆ. ಸಭೆ ಮುಗಿಸಿದ ನಂತರ ಮೋಹನ್ ಭಾಗವತ್ ನಗರದ ವಿವಿಧೆಡೆ ಭೇಟಿ ನೀಡಿದ್ದಾರೆ.
ಸಂಜೆಯ ವೇಳೆಗೆ ನಗರದ ಕೋಟೆಯಲ್ಲಿರುವ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಓಟಿ ರಸ್ತೆಯಲ್ಲಿರುವ ದಿ.ದಿನೇಶ್ ಪೈ ಅವರ ಮನೆಗೆ ಭೇಟಿ ನೀಡಿದ್ದಾರೆ. ನಗರದ ಹಿಂದೂ ಶಕ್ತಿ ಕೇಂದ್ರವಾದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ ಸಂಚಾಲಕರಿಗೆ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆ.
ದೇವಸ್ಥಾನದ ವಾತಾವರಣ ಕಂಡು ಸಂತೋಷ ಪಟ್ಟ ಮೋಹನ್ ಭಾಗವತರು ದೇವಸ್ಥಾನವನ್ನ ಅದ್ಬುತವೆಂದು ಬಣ್ಣಿಸಿದ್ದಾರೆ. ನಾಳೆ ಪೇಸ್ ಕಾಲೇಜಿನಲ್ಲಿ ಸಭೆ ನಡೆಯಲಿದ್ದು, 650 ಜನ ಭಾಗಿಯಾಗಲಿದ್ದಾರೆ. ನಾಡಿದ್ದು ಸಹ ನಗರದಲ್ಲಿಯೇ ಇದ್ದು ಸಂಜೆಯ ಮೇಲೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…
ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…
ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…
ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…