Headlines

ರಸ್ತೆ ಗುಂಡಿಗಳನ್ನು‌ ಮುಚ್ಚುವಂತೆ ಒತ್ತಾಯಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ|Hosanagara

ಹೊಸನಗರ ತಾಲೂಕು ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ರಸ್ತೆಗಳು ಗುಂಡಿ ಬಿದ್ದಿರುವುದನ್ನು ವಿರೋಧಿಸಿ ತಾಲ್ಲೂಕು ಆಮ್ ಆದ್ಮಿ ಪಕ್ಷದ ವತಿಯಿಂದ  ವಿಭಿನ್ನ ರೀತಿಯ ಪ್ರತಿಭಟನೆ ಮಾಡಲಾಯಿತು.

ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಹಾರ ಹಾಕಿ ಊದುಬತ್ತಿ ಹಚ್ಚಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.




ಈ ಸಂಧರ್ಭದಲ್ಲಿ ಮಾತನಾಡಿದ ಹೊಸನಗರ ತಾಲೂಕ್ ಆಮ್ ಆದ್ಮಿ‌ಪಕ್ಷದ ಅಧ್ಯಕ್ಷ ಗಣೇಶ್ ಸೋಗೋಡು ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ತಲೆಕೆಡಿಸಿಕೊಂಡಿಲ್ಲ,ತುಂಬು ಗರ್ಭಿಣಿಯರನ್ನು ವಾಹನಗಳಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಲ್ಲಿ ಆಸ್ಪತ್ರೆ ರಸ್ತೆಯ ಹೊಂಡ ಗಳು ಆಸ್ಪತ್ರೆ ತಲುಪುವ ಮೊದಲೇ ಹೆರಿಗೆ ಮಾಡಿಸುವಂತಿದೆ ಇಲ್ಲಿನ ರಸ್ತೆಯ ವ್ಯವಸ್ಥೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.




ಈ ಪ್ರತಿಭಟನೆಯಲ್ಲಿ ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಹಸನಬ್ಬ ಬ್ಯಾರಿ, ಯುವ ಘಟಕದ ಅಧ್ಯಕ್ಷ ಚೇತನ್, ರೈತನಾಯಕ ಈಶ್ವರಪ್ಪ ಗೌಡ ಸಾಮಾಜಿಕ ಹೋರಾಟಗಾರ ಟಿಆರ್ ಕೃಷ್ಣಪ್ಪ ಮಹಿಳಾ ಮುಖಂಡರಾದ ಫಾತಿಮಾ. ಜಗದೀಶ್ ಬಿದರಹಳ್ಳಿ ಇನ್ನೂ ಹಲವರು ಉಪಸಿತರಿದ್ದರು.


Leave a Reply

Your email address will not be published. Required fields are marked *

Exit mobile version