Headlines

ಹೆದ್ದಾರಿಪುರ : ಹದಗೆಟ್ಟ ರಸ್ತೆ – ಗ್ರಾಮಸ್ಥರಿಂದಲೇ ದುರಸ್ತಿ‌ ಕಾರ್ಯ|Heddaripura

ಹೆದ್ದಾರಿಪುರ : ಇಲ್ಲಿನ ಸಮೀಪದ ಸುಳುಕೋಡು-ಕಗಚಿ ರಸ್ತೆಯು ಹದಗೆಟ್ಟು  ಹೋಗಿತ್ತು ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಸರ್ಕಾರ, ಅಧಿಕಾರಿಗಳಿಗೆ ಅದೆಷ್ಟೇ ಮನವಿ ಕೊಟ್ಟರೂ ಫಲ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ತಾವೇ ಒಟ್ಟು ಸೇರಿ ರಸ್ತೆ ರಿಪೇರಿ ಮಾಡಿಕೊಂಡಿರುವ ಘಟನೆ ನಡೆದಿದೆ.


ಹೌದು ಬಿದರಹಳ್ಳಿ – ಕಗಚಿ – ಜೀರಿಗೆಮನೆ- ಸುಳುಕೋಡು – ರಿಪ್ಪನ್‌ಪೇಟೆ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು,ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಗಿಡ ಬೆಳೆದು ಸಂಚಾರಕ್ಕೆ ಅನಾನುಕೂಲವಾಗಿತ್ತು.


ಈ ಮಾರ್ಗದಲ್ಲಿ ಪ್ರತಿನಿತ್ಯ 50 ರಿಂದ 60 ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಂಚರಿಸುತಿದ್ದು ಇತ್ತೀಚೆಗೆ ಈ ರಸ್ತೆಯ ಅವ್ಯವಸ್ಥೆಯಿಂದ ಶಾಲಾ ವಾಹನವೊಂದು ಅಪಘಾತಕ್ಕೀಡಾಗಿತ್ತು.

ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು

ಅಧಿಕಾರಿಗಳ ದಾರಿ ಕಾದರೆ ರಸ್ತೆ ರಿಪೇರಿಯಾಗದು. ಹೀಗಾಗಿ ಏನಾದರೂ ಮಾಡಬೇಕೆಂದರಿತ ಗ್ರಾಮಸ್ಥರು ಸೇರಿ ಮಾತುಕತೆ ನಡೆಸಿ ಎಲ್ಲಾರು ಸೇರಿ ರಸ್ತೆ ರಿಪೇರಿ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ತಿಳಿಸಲಾಗಿತ್ತು. ಹೀಗೆ ಕಾರ್ಯ ಪ್ರವೃತ್ತರಾದ ಜನರು, ರಸ್ತೆಗೆ ಬೇಕಾದ ಮಣ್ಣನ್ನು ಟ್ರ್ಯಾಕ್ಟರ್​​ನಲ್ಲಿ ತಂದು ಹಾಕಿ ಸುಮಾರು ಒಂದು ಕಿ.ಮೀ ರಸ್ತೆ ದುರಸ್ತಿ ಮಾಡಿದ್ದಾರೆ.ರಸ್ತೆಯ ಇಕ್ಕೆಲಗಳ ಜಾಲಿ ಗಿಡಗಳನ್ನು ಕಡಿದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ರಸ್ತೆಗೆ ಕಳೆದ ಬಾರಿ ಗ್ರಾಪಂ ಅನುದಾನದಲ್ಲಿ ಮಣ್ಣನ್ನು ಹಾಕಿದ್ದು ಇತ್ತೀಚೆಗೆ ಸುರಿದ ಬಾರಿ ಮಳೆಗೆ ಕೊಚ್ಚಿ ಹೋಗಿದೆ.ಈ ಸಂಪರ್ಕ ರಸ್ತೆಗೆ ಶಾಶ್ವತ ಪರಿಹಾರಕ್ಕಾಗಿ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ತಮ್ಮೂರಿನ ರಸ್ತೆ ತಾವೇ ದುರಸ್ತಿ ಮಾಡಿಕೊಳ್ಳೋಣ ಎಂದು ನಿರ್ಣಯ ಮಾಡಿಕೊಂಡು ದುರಸ್ತಿ ಪಡಿಸಿದ್ದೇವೆ.ಮುಂದಿನ ದಿನಗಳಲ್ಲಿ ಈ ಸಂಪರ್ಕ ರಸ್ತೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡದೇ ಇದ್ದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೆದ್ದಾರಿಪುರ ಗ್ರಾಪಂ ಸದಸ್ಯ ಪ್ರವೀಣ್ ಸುಳುಕೋಡು ಹೇಳಿದ್ದಾರೆ.

ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ಜಯಪ್ಪ ಎಸ್ ,ರಾಘವೇಂದ್ರ, ನವೀನ್ ,ಜಯಣ್ಣ ಕೆ ,ಷಣ್ಮುಖ , ಹಾಗೂ ಇನ್ನಿತರ ಗ್ರಾಮಸ್ಥರು ಇದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *

Exit mobile version