ತೀರ್ಥಹಳ್ಳಿ : ತಾಲೂಕಿನ ಮಾಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬಲವಾಗಿ ಹೊಡೆದು ಆತನನ್ನ ಬೈಕ್ ನಲ್ಲಿ ಕರೆದುಕೊಂಡು ಬಂದು ಮನೆಯ ಬಾಗಿಲಿನಲ್ಲಿ ಬಿಟ್ಟು ಹೋಗಿದ್ದ ಪ್ರಕರಣದಲ್ಲಿ ನಾಲ್ವರನ್ನ ಬಂಧಿಸಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯಲ್ಲಿ ಸೆ.25 ರಂದು ಬೆಳ್ಳಿಕೋಡಿಗೆ ಗ್ರಾಮದಲ್ಲಿ ರಾಜು ಎಂಬ ವ್ಯಕ್ತಿ ಕುಡಿಯಲು ಅಲ್ಲಿದ್ದ ಕೋಳಿ ಅಂಗಡಿಯ ಬಳಿ ಕೋಳಿ ಕದಿಯಲು ಬಂದಿದ್ದೀಯ ಎಂದು ಆರೋಪಿಸಿ ಶಿಶಿರ, ವಿಜಯೇಂದ್ರ ಮತ್ತು ಶಿವು ಎಂಬುವರು ರಾಜುನನ್ನ ಕೈಕಾಲು ಕಟ್ಟಿಹಾಕಿ ದೊಣ್ಣೆಗಳಿಂದ ಹೊಡೆದಿರುತ್ತಾರೆ. ನಂತರ ಬೈಕ್ ನಲ್ಲಿ ಕರೆದುಕೊಂಡು ಬಂದು ಮನೆಯ ಮುಂದೆ ಬಿಟ್ಟುಹೋಗಿರುತ್ತಾರೆ . ಮನೆಯ ಬಳಿ ಬರುತ್ತಿದ್ದ ರಾಜು ನಿತ್ರಾಣನಾಗಿ ಜೋರಾಗಿ ಕಿರುಚಿಕೊಳ್ಳುತ್ತಾನೆ. ಜೋರಾಗಿ ಕಿರುಚಿಕೊಂಡಾಗ ಬಂದ ಹೆಂಡತಿ ಪುಷ್ಪಲತಾ ಮತ್ತು ಮಗಳು ಪೂರ್ಣಿಮಾ ಉಪಚರಿಸುತ್ತಾರೆ. ಮಗ ಸಂದೇಶನ ಬಳಿ ಘಟನೆಯನ್ನ ವಿವರಿಸಿದ ರಾಜು ಕುಡಿಯಲು ನೀರು ಕೊಡು ಎಂದು ಕೇಳಿದ್ದಾನೆ. ನೀರು ತರುವಷ್ಟರಲ್ಲಿ ರಾಜು ಕೊನೆ ಉಸಿರು ಬಿಟ್ಟಿರುತ್ತಾನೆ.
ಈ ಪ್ರಕರಣದ ಸಂಬಂಧ ನಾಲ್ವರನ್ನ ಮಾಳೂರು ಪೊಲೀಸರು ಬಂಧಿಸಿದ್ದಾರೆ.. ಶಿಶಿರ, ಶಿವು, ವಿಜೇಂದ್ರ ಮತ್ತು ಸತೀಶ್ ಎಂಬುವರನ್ನ ಬಂಧಿಸಲಾಗಿದ್ದು ಸತೀಶ್ ಎಂಬಾತ ಈ ಮೂವರೊಂದಿಗೆ ಇದ್ದ ಎಂಬ ಕಾರಣಕ್ಕೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.