ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಬ್ಬಡಿ ಆಟಗಾರನಾಗಿದ್ದ ಸುಶ್ಮಂತ್ ಅವರು ಇಂದು ರಾಹುಲ್ ಗಾಂಧಿಯೊಂದಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ತನ್ನ ಕೃತಕ ಕಾಲಿನ ಸಹಾಯದಿಂದ ಹೆಜ್ಜೆ ಹಾಕಿದರು.
ಹೆದ್ದಾರಿಪುರ ಗ್ರಾಮದ ಪ್ರತಿಭಾವಂತ ಯುವ ಕಬ್ಬಡಿ ಆಟಗಾರ ಸುಶ್ಮಾಂತ್ ತನ್ನ ಒಂದು ಕಾಲನ್ನು ಕಳೆದುಕೊಂಡು ಕಿಚ್ಚ ಸುದೀಪ್ ಟ್ರಸ್ಟ್, TV9 ಮಾರುವೇಷ ತಂಡ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಇವರ ನೆರವಿನಿಂದ ಕೃತಕ ಕಾಲನ್ನು ಅಳವಡಿಸಿಕೊಂಡಿದ್ದ.
ಸುಶ್ಮಾಂತ್ ಜೊತೆ ಹೆಜ್ಜೆ ಹಾಕುವಾಗ ಕಾಲನ್ನು ಕಳೆದುಕೊಂಡಿದ್ದರ ಬಗ್ಗೆ ಸುಶ್ಮಂತ್ ರಿಂದ ಮಾಹಿತಿ ಪಡೆದ ರಾಹುಲ್ ಆತ್ಮ ವಿಶ್ವಾಸದೊಂದಿಗೆ ಬದುಕಿ ಸಮಾಜದಲ್ಲಿ ಎಲ್ಲರಂತೆ ಬಾಳಿ ಇನ್ನುಳಿದವರಿಗೆ ಮಾದರಿಯಾಗಿ ಎಂಬುವ ಪ್ರೇರಣಾ ನುಡಿಗಳನ್ನಾಡಿದರು.
ಈ ಸಂಧರ್ಭದಲ್ಲಿ ಕೃತಕ ಕಾಲನ್ನು ಕೊಡಿಸಲು ನೆರವಾದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್ ಮತ್ತು ಯುವ ಕಾಂಗ್ರೆಸ್ ತಂಡದವರಿಗೆ ಸುಶ್ಮಾಂತ್ ಅಭಿನಂದನೆ ತಿಳಿಸಿದರು.
ಪ್ರತಿಭಾವಂತ ಆಟಗಾರ ಸುಶ್ಮಾಂತ್:
ಕಬಡ್ಡಿಯನ್ನೆ ಹಗಲು ರಾತ್ರಿ ಧ್ಯಾನಿಸುತ್ತಿದ್ದ ಹುಡುಗ ಸುಶ್ಮಾಂತ್ , ಕಬಡ್ಡಿಯಲ್ಲೆ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡುವ ಹಾದಿಯಲ್ಲಿದ್ದ ಹುಡುಗ ಮತ್ತೆ ಕಬಡ್ಡಿ ಆಡಲಾರ ಎಂಬುವುದು ನುಂಗಲಾರದ ವಿಷಯವಾಗಿತ್ತು. ಕಾಲು ಕತ್ತರಿಸಲೇಬೇಕಾದ ಪರಿಸ್ಥಿತಿ ಒದಗಿದಾಗ ಕಬಡ್ಡಿ ಆಡದಿದ್ರೂ ಪರ್ವಾಗಿಲ್ಲಾ ಅವನು ಕಬಡ್ಡಿ ಆಟದ ಭಾಗವಾಗ ಬೇಕು, ಕೋಚ್ , ಸಹಾಯಕ ಕೋಚ್, ಮೆಂಟರ್ ಏನಾದರೂ ಆಗಲೇ ಬೇಕು ಎಂದು ಅವನ ಸ್ನೇಹಿತರು ಕುಟುಂಬಸ್ಥರು ತೀರ್ಮಾನಿಸಿದ್ದರು.
ಸರ್ವ ವಿಧದ ನೋವುಣ್ಣುವಾಗಲೂ ತನ್ನ ಚಂದದ ನಗುವಿನಿಂದ ಜಗತ್ತು ಗೆಲ್ಲಬಲ್ಲೆ ಎಂದು ವಿಶ್ವಾಸ ಹುಟ್ಟಿಸುತ್ತಿದ್ದ ಹುಡುಗನಿಗೆ ಆಪರೇಷನ್ ನಂತರ ಪ್ರೊಸ್ಥೆಟಿಕ್ ಲೆಗ್ ಹಾಕಿಸಿಕೊಳ್ಳುವ ಆಸೆ ಇತ್ತು.
ಹೇಳಿ ಕೇಳಿ ಹತ್ತಾರು ಲಕ್ಷದ ಕಾಲು , ಬಡ ಹುಡುಗನಿಗೆ ಕೊಡುವವರು ಯಾರು?
ಈ ಬಗ್ಗೆ ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು, ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಆಕ್ಸಿಜನ್ ಮ್ಯಾನ್ ಎಂದೇ ಪ್ರಸಿದ್ದರಾಗಿದ್ದ ಬಿ ವಿ ಶ್ರೀನಿವಾಸ್ ರವರಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ್ ಹುಂಚದಕಟ್ಟೆ ಮಾಹಿತಿ ನೀಡಿ ಯುವ ಕಾಂಗ್ರೆಸ್ ಫೌಂಡೇಶನ್ ದಿನದಂದು ಪ್ರೊಸ್ಥೆಟಿಕ್ ಲೆಗ್ ಹಾಕಿಸಲಾಯಿತು.
ಯುವ ಆಟಗಾರನಿಗೆ ಕಿಚ್ಚ ಸುದೀಪ್ ಟ್ರಸ್ಟ್, TV9 ಮಾರುವೇಷ ತಂಡ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ನೆರವಾಗುವ ಮೂಲಕ ಸೇವಾ ಮನೋಭಾವ ಮೆರೆದಿದ್ದಾರೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

- ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್