ಖಾಸಗಿ ಬಸ್ವೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಹೊಳೆಹೊನ್ನೂರು ಸಮೀಪ ಸಿದ್ಲಿಪುರದ ಬಳಿ ನಡೆದಿದೆ.
ಶಿವಮೊಗ್ಗ ದಿಂದ ಚಿತ್ರದುರ್ಗ ಕ್ಕೆ ಹೋಗುತ್ತಿದ್ದ ಬಸ್, ಹೊಳೆಹೊನ್ನೂರು ಸಮೀಪ ಸಿದ್ಲಿಪುರದ ಬಳಿ ಪಲ್ಟಿ!
ಘಟನೆಯಲ್ಲಿ ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೆಗ್ಗಾನ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೊಳೆಹೊನ್ನೂರು ಸಮೀಪದ ಸಿದ್ಲಿಪುರದಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿದೆ. ಎದುರಿನಿಂದ ಬರುತ್ತಿದ್ದ ಲಾರಿಗೆ ಜಾಗ ಬಿಡಲು ಸೈಡ್ಗೆ ಬಂದಾಗ, ಬಸ್ ರೋಡ್ ಕೆಳಕ್ಕೆ ಇಳಿದಿದೆ. ಅಲ್ಲದೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.