Headlines

ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನವರಿಗಿಲ್ಲ – ಬಿ ವೈ ರಾಘವೇಂದ್ರ

ತೀರ್ಥಹಳ್ಳಿ : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬಗ್ಗೆ ಕೆಲವು ನಾಯಕರು ತುಂಬಾ ಹಗುರವಾಗಿ ಮಾತನಾಡುತ್ತಿದ್ದಾರೆ. ರಾಜಕಾರಣ ಮಾಡಲು ಬೇರೆ ವಿಚಾರಗಳಿದೆ. ಅದನ್ನೆಲ್ಲ ಬಿಟ್ಟು ಅಲ್ಲಿ ಆರ್ ಎಸ್ ಎಸ್ ಅನ್ನು ಎಳೆಯುವಂತಹದ್ದು ಸರಿಯಲ್ಲ ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನವರಿಗಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ತೀರ್ಥಹಳ್ಳಿಯಲ್ಲಿ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿ ಆರ್ ಎಸ್ ಎಸ್ ಎಂಬುದು ದೇಶಕ್ಕೋಸ್ಕರ, ಹಿಂದೂ ರಾಷ್ಟ್ರಕ್ಕೊಸ್ಕರ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಸಾವಿರಾರು ಕಾರ್ಯಕರ್ತರ ಶ್ರಮ ಇರುವ ಸಂಘಟನೆ. ಆರ್ ಎಸ್ ಎಸ್ ಎಂಬುದು ಯಾವುದೋ ಕೋಮಿನ, ಜಾತಿಯ ಸಂಘಟನೆ ಅಲ್ಲ. ಅದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಇನ್ನು ಪಠ್ಯಪರಿಷ್ಕರಣೆ ಬಗ್ಗೆ ಮಾತನಾಡಿ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪಠ್ಯಪರಿಷ್ಕರಣೆ ಹಳೆಯ ಸಮಿತಿಯ ಅಧ್ಯಕ್ಷರ ಸಮಯ ಮುಗಿದಿತ್ತು ಹಾಗೂ ಈಗ ಆಗಿರುವ ಕೆಲವು ತಿದ್ದುಪಡಿಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಆ ಸಮಸ್ಯೆಯನ್ನು ಸರ್ಕಾರ ಸರಿಪಡಿಸಲಿದೆ ಎಂದು ತಿಳಿಸಿದರು.


Leave a Reply

Your email address will not be published. Required fields are marked *

Exit mobile version