ತೀರ್ಥಹಳ್ಳಿ : ಹಣಗೆರೆಕಟ್ಟೆ ದರ್ಗಾ ಮತ್ತು ದೇವಸ್ಥಾನಕ್ಕೆ ಬಂದಿದ್ದ ಚನ್ನಗಿರಿ ತಾಲೂಕಿನ ಮೂವರು ಪ್ರವಾಸಿಗರು.ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಸಿಬ್ಬಂದಿಯ ಮೊಬೈಲ್ ನ್ನ ನೆಲಕ್ಕೆ ಕುಟ್ಟಿ ಹಾಳು ಮಾಡಿರುವ ಘಟನೆ ಭಾನುವಾರ ನಡೆದಿದೆ.
ಹಣಗೆರೆಕಟ್ಟೆಯಲ್ಲಿನ ಹಜರತ್ ಸೈಯ್ಯದ್ ಸಾದತ್ ದರ್ಗಾ ಹಾಗೂ ಶ್ರೀ ಭೂತರಾಯ ಚೌಡೇಶ್ವರಿ ದೇಗುಲಕ್ಕೆ ಬಂದ ಚನ್ನಗಿರಿ ತಾಲೂಕು ಬೆಂಕಿಕೆರೆ ನಿವಾಸಿಗಳಾದ ಹರೀಶ್, ಸೋಮಣ್ಣ, ಚಂದ್ರಪ್ಪ ಸೇರಿಕೊಂಡು ಅರಣ್ಯ ಜಾಗದಲ್ಲಿ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಈ ವೇಳೆ ಪ್ಲಾಸ್ಟಿಕ್
ಬಾಟಲ್ ಗಳನ್ನು ಮನಸೋ ಇಚ್ಛೆ ಬಿಸಾಕಿದ್ದಾರೆ.
ಬೀಟ್ಸ್ ನಡೆಸುತ್ತಿದ್ದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಿಬ್ಬಂದಿಗಳಾದ ರಮೇಶ್, ಯೋಗೇಶ್ವರಪ್ಪ ಈ ಮೂವರಿಗೆ ಅರಣ್ಯ ಜಾಗದಲ್ಲಿ ಮದ್ಯ ಸೇವಿಸುವಂತಿಲ್ಲ. ಇದು ಅತಿಕ್ರಮಣ ಪ್ರವೇಶವಾಗುತ್ತದೆ ಮತ್ತು ಗಲೀಜು ಮಾಡುವಂತಿಲ್ಲ ಎಂದು ತಿಳಿ ಹೇಳಿದ್ದಾರೆ. ಆದರೂ ಈ ಮೂವರು
ಮದ್ಯಪಾನ ಸೇವನೆ ಮುಂದುವರೆಸಿದ್ದಾರೆ.
ನಂತರ ಸಿಬ್ಬಂದಿ ರಮೇಶ್ ಗೆ ನೀನು ಯಾರು ಎಂದು ಪ್ರಶ್ನಿಸಿದ ಹರೀಶ್ ನಿಮ್ಮನ್ನ ಕೊಲೆ ಮಾಡುತ್ತೇವೆ ಎಂದು ಬೆದರಿಸಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಹರೀಶ್ ಜೊತೆಗಿದ್ದ ಸೋಮಣ್ಣ ಮತ್ತು ಚಂದ್ರಪ್ಪ ಸಿಬ್ಬಂದಿ ಯೋಗೇಶ್ವರ್ ಮೇಲೂ ಹಲ್ಲೆ ನಡೆಸಿದ್ದಾರೆ.ಯೋಗೇಶ್ವರ್ ಕಣ್ಣು ಮೂಗಿನ ಮೇಲೆ ಹಲ್ಲೆ ಮಾಡಲಾಗಿದೆ. ಈ ವೇಳೆ ಬಂದ ಶಿವರಾಜ್ ಮಹೇಶ್ ಲಕ್ಷ್ಮಣ್ ಎಂಬುವರು ಜಗಳ ಬಿಡಿಸಿದ್ದಾರೆ.
ಮೇಲಾಧಿಕಾರಿಗಳಿಗೆ ವಿಷಯ ತಿಳಿಸಲು ರಮೇಶ್ ಮೊಬೈಲ್ ತೆಗೆದಾಗ ಹರೀಶನು ಮೊಬೈಲ್ ಕಸಿದುಕೊಂಡು ನೆಲಕ್ಕೆ ಬಡಿದು ಹಾನಿ ಮಾಡಿದ್ದಾನೆ. ಈ
ಹಿನ್ನಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ಪ್ರವೇಶಿಸಿ ಮದ್ಯಸೇವನೆ ಮಾಡಿ, ಸಿಬ್ಬಂದಿ ರಮೇಶ್ ನ ಮೊಬೈಲ್ ಒಡೆದು ಹಾಕಿ ನಂತರ ಯೊಗೇಶ್ವರ್ ಗೆ
ಮಾರಣಾಂತಿಕ ಹಲ್ಲೆ ನಡೆಸಿದ ಹರೀಶ್,ಸೋಮಣ್ಣ ಮತ್ತು ಚಂದ್ರಪ್ಪನ ವಿರುದ್ಧ ಮಾಳೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.