Headlines

ಅಕ್ರಮ ಗೋಮಾಂಸ ಅಂಗಡಿಯ ಮೇಲೆ ದಾಳಿ : ಓರ್ವನ ಬಂಧನ

ಅಕ್ರಮ ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಮಾಳೂರು ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಅಂಗಡಿ ನಡೆಸುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.

ತೀರ್ಥಹಳ್ಳಿಯ ಮಂಡಗದ್ದೇ ಸಮೀಪದ ಲಿಂಗಾಪುರ ಗ್ರಾಮದ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು, ವಧಿಸಲು ಸಿದ್ದವಾಗಿದ್ದ ಗೋವನ್ನು ನವೀನ್ ಕುಮಾರ್ ಮಠಪತಿ ನೇತ್ರತ್ವದಲ್ಲಿ  ದಾಳಿ ನಡೆಸಿ ಹಸುವನ್ನು ರಕ್ಷಿಸಿದ್ದಾರೆ.

ಗೋ ಮಾಂಸದ ಜೊತೆಗೆ ಜೀವಂತ ಹಸುವನ್ನು ರಕ್ಷಿದ ಪೊಲೀಸರು ಆರೋಪಿ ಇಜಾಜ್ ಪಾಶಾ ಎಂಬಾತನನ್ನು  ಬಂಧಿಸಿದ್ದಾರೆ.

ಈ ದಾಳಿಯಲ್ಲಿ ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಮತ್ತು ಸಿಬ್ಬಂದಿಗಳಾದ ಪುನೀತ್, ಸಂದೀಪ್, ಅಭಿಲಾಶ್ ಭಾಗಿಯಾಗಿದ್ದರು.

About The Author

Leave a Reply

Your email address will not be published. Required fields are marked *

Exit mobile version