ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಿದ್ದಗಿರಿ ಸಮೀಪದ ಕ್ವಾರೆ ಕ್ರಾಸ್ ಗ್ರಾಮದಲ್ಲಿ ಸುಮಾರು 50 ರ ಪ್ರಾಯದ ಆಸುಪಾಸಿನ ವ್ಯಕ್ತಿಯ ಶವ  ದೊರೆತಿದೆ.
 ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೂ ಗುರುತು ಪತ್ತೆಯಾಗಿಲ್ಲ.ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ,
 ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ದೌಡಾಯಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ.
 ಮೃತ ವ್ಯಕ್ತಿಯ ಬಗ್ಗೆಗಿನ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
  


