Headlines

25ಕ್ಕೂ ಅಧಿಕ ಗೋವುಗಳಿಗೆ ವಿಷವಿಕ್ಕಿ ಹತ್ಯೆಗೈದ ಯಡೂರಿನ ನಟೋರಿಯಸ್ ಗೋಹಂತಕ…….!!!!!!?

ಹೊಸನಗರ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ನಟೋರಿಯಸ್ ಗೋಹಂತಕನೊಬ್ಬ ಗೋವುಗಳನ್ನು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹಲಸಿನ ಹಣ್ಣಿನ ಒಳಗೆ ವಿಷ ಹಾಕಿ ಅಮಾಯಕ ಮೂಕಪ್ರಾಣಿಗಳನ್ನು ಹತ್ಯೆ ಮಾಡಿರುವ ದಾರುಣ್ಯ ಘಟನೆ ಮಲೆನಾಡಿನ ಯಡೂರು ಗ್ರಾಪಂ ವ್ಯಾಪ್ತಿಯ ಸುಳುಕೋಡು ಗ್ರಾಮದಲ್ಲಿ ನಡೆದಿದೆ.


ಜಾನುವಾರು ನುಗ್ಗಿದೆ ಎಂದು ತೋಟದ ಮಾಲೀಕನೊಬ್ಬ ನಮ್ಮ ಜಾನುವಾರಿಗೆ ವಿಷ ಹಾಕಿದ್ದಾರೆ  ಎಂಬುದಾಗಿ ಜಾನುವಾರು ಮಾಲೀಕರಾದ ಯಡೂರು ಗ್ರಾಮದ ಲತಾ ಎಂಬುವವರು  ಆರೋಪಿಸಿದ್ದಾರೆ.

ಈಗಾಗಲೇ ನಾಲ್ಕೈದು ದನಗಳು  ಸಾವನ್ನಪ್ಪಿದ್ದು  ಕೆಲವು 2ದಿನಗಳಿಂದ ವಿಷ ಉಂಡು ಸಂಕಟ ಪಡುತ್ತಿದ್ದಾವೆ,  ಮೂಕ ಪ್ರಾಣಿಗಳ ನರಕಯಾತನೆಯನ್ನು ನೋಡಲು ಸಾಧ್ಯವಿಲ್ಲ ಎಂಬುದಾಗಿ ಹಸುಗಳನ್ನು ಸಾಕಿದ ಮನೆಯವರು ಸಂಕಟದಿಂದ ತಿಳಿಸಿದ್ದಾರೆ.


ಇತ್ತೀಚಿನ ನಾಲ್ಖೈದು ತಿಂಗಳುಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಜಾನುವಾರುಗಳಿಗೆ ವಿಷವುಣಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಅದೇನೇ ಆಗಲಿ ಜಾನುವಾರುಗಳು ತೋಟದೊಳಗೆ ಹೋಗಬಾರದು ಎಂದರೆ ತೋಟದ ಮಾಲೀಕರು ತಮ್ಮ ತೋಟಕ್ಕೆ ಸೂಕ್ತವಾದ ಬೇಲಿ ಭದ್ರತೆ  ಮಾಡಿಕೊಳ್ಳಬೇಕು ಅವುಗಳನ್ನು ಬಿಟ್ಟು ಈ ರೀತಿ ಜಾನುವಾರುಗಳು ತೋಟಕ್ಕೆ ನುಗ್ಗಿದೆ  ಎಂದು ಮೂಕ ಪ್ರಾಣಿಗಳಿಗೆ ವಿಷ ಉಣಿಸಿರುವುದು ಹೇಯಕೃತ್ಯ

ತೋಟದ ಮಾಲೀಕ ವಿಷ ಉಣಿಸಿದ್ದಾರೋ ಇಲ್ಲವೋ ಗೊತ್ತಿಲ್ಲ!?
ಆದರೆ ಜಾನುವಾರುಗಳ ಮಾಲೀಕರು ಇವರ ಹೆಸರನ್ನು ಹೇಳುತ್ತಿದ್ದಾರೆ.
ಸ್ಥಳೀಯರು ಈವರೆಗೂ ದೂರು ನೀಡಿಲ್ಲ ಕಾರಣ ಈ ವ್ಯಕ್ತಿ ಪ್ರಭಾವಿಯಾಗಿದ್ದು ಮುಂದೆ ತೊಂದರೆ ಕೊಡುತ್ತಾರೆ ಎಂಬುವ ಭಯದಿಂದ ಹಿಂದೆ ಸರಿದಿದ್ದಾರೆ.

ಆದ್ದರಿಂದ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು ಈ ರೀತಿ ಮೂಕ ಪ್ರಾಣಿಗಳಿಗೆ ವಿಷ ಉಣಿಸಿರುವ ದುರುಳರು ಮಾನವೀಯತೆಯ ಇಲ್ಲದಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

Exit mobile version