Headlines

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಒಂದು ವಾರದೊಳಗೆ ಎನ್ಐಎಗೆ ಹಸ್ತಾಂತರ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹರ್ಷನ ಕೊಲೆ ಪ್ರಕರಣವನ್ನ ಇನ್ನೊಂದು ವಾರದೊಳಗೆ ಎನ್ಐಎ ತನಿಖಾ ತಂಡಕ್ಕೆ ಒಪ್ಪಿಸಲಾಗುವುದು ಎಂದು ಕೃಷಿ ಮತ್ತು ರೈತರ ಕಲ್ಯಾಣ ಕೇಂದ್ರ ಮಂತ್ರಿ ಶೋಭ ಕರದ್ಲಾಂಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಶಿವಮೊಗ್ಗದ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಂತರ ಮಾಧ್ಯಮಗಳಿಗೆ ಮಾತನಾಡಿ ಹರ್ಷನ ಸಾವು ಕೇವಲ ಕುಟುಂಬಕ್ಕೆ ದುಖ ತಂದಿಲ್ಲ ಬದಲಿಗೆ ಇಡೀ ದೇಶಕ್ಕೆ ನೋವುತಂದಿದೆ ಎಂದರು.

ಹರ್ಷನ ಸಾವಿನ ಹಿಂದೆ ಅಂತರಾಷ್ಟ್ರೀಯ ಷಡ್ಯಂತರ ಅಡಗಿದೆ ಎಂಬ ಶಂಕೆ ಇದೆ. ಈ ಹೇಳಿಕೆಯನ್ನ ಹರ್ಷ ಕೊಲೆಯಾದ‌ ಮೊದಲನೇ ದಿನವೇ ಹೇಳಿದ್ದೆ. ಆತನ ಕೊಲೆಯ ಹಿಂದೆ ದೊಡ್ಡ ದೊಡ್ಡ ಸಂಘಟನೆಗಳ ಕೈವಾಡದ ಶಂಕೆಯಿದೆ ಎಂದು ಹೇಳಿದ್ದೆ.

ಕೇಂದ್ರ ಸರ್ಕಾರ ಈ ಪ್ರಕರಣವನ್ನ ಎನ್ಐಎಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ  ಹೇಳಿದೆ.  ಹಾಗಾಗಿ ಒಂದು ವಾರದೊಳಗೆ ಎನ್ಐಎಗೆ ಈ‌ ಪ್ರಕರಣ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ ಎಂದರು.

ಹರ್ಷನ ಕೊಲೆ ಮಾಡಿರುವುದನ್ನ ನೋಡಿದರೆ ತಾಲಿಬಾನ್ ನ ಸಂಸ್ಕೃತಿ ಎದ್ದುತೋರುತ್ತದೆ. ಕೊಲೆ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಾರೆ ಎಂದರೆ ಅವರ ಮಾನಸಿಕತೆ ಎಷ್ಟಿದೆ ಎಂದು ತಿಳಿದುಬರುತ್ತದೆ. ಇದು ಒಂದು ಮನೆಯ ಸಮಸ್ಯೆಯಲ್ಲ. ಈ ಸಮಸ್ಯೆ ಇಡೀ ಹಿಂದೂ ಸಮಾಜದ ಸಮಸ್ಯೆ ಆಗಿದೆ. 25 ರಿಂದ 30 ಹಿಂದೂ ಕಾರ್ಯಕರ್ತರನ್ನ ಸಮಾಜ ಕಳೆದುಕೊಂಡಿದೆ. ಇವರ ಅಟ್ಟಹಾಸವನ್ನ ತಡೆಯಬೇಕಿದೆ ಎಂದರು.

Leave a Reply

Your email address will not be published. Required fields are marked *

Exit mobile version