Headlines

ಕಾರು ಮರಕ್ಕೆ ಡಿಕ್ಕಿ : ಭೀಕರ ಅಪಘಾತದಲ್ಲಿ ಓರ್ವನ ಸಾವು

ಭದ್ರಾವತಿ : ಇಲ್ಲಿನ ಬಿ.ಹೆಚ್ ರಸ್ತೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಬಳಿ ಭೀಕರ ರಸ್ತೆ‌ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಈ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮೂವರು ಪ್ರಯಾಣಿಕರು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಭದ್ರಾವತಿಯ ಡಿಎಫ್ ಒ ಕಚೇರಿ ಮುಂಭಾಗದ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್ ಎಂಬುವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉಳಿದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳವಾರ ಮಧ್ಯಾಹ್ನ ರಾತ್ರಿ ಈ ಅವಘಢ ಸಂಭವಿಸಿದ್ದು…

Read More

ರಿಪ್ಪನ್ ಪೇಟೆ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು,ಯುವಕನನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ವಿದ್ಯಾರ್ಥಿಗೆ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಪಿಹೆಚ್ ಸಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ ಕೋವಿಡ್ ಪರೀಕ್ಷೆಯ ವರದಿಯು ಇಂದು ಪಾಸಿಟಿವ್ ಎಂದು ಬಂದಿದೆ.ವಿದ್ಯಾರ್ಥಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕಾಲೇಜಿನ 2nd ಬಿಕಾಂ ನ ಎಲ್ಲಾ ವಿದ್ಯಾರ್ಥಿಗಳ ಸ್ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ.  ಕೂಡಲೇ ಎಚ್ಚೆತ್ತುಕೊಂಡ ಕಾಲೇಜಿನ ಆಡಳಿತ…

Read More

70 ಸಾವಿರ ರೂ. ಲಂಚ ಪಡೆಯುತ್ತಿದ್ದ ಪಿಡಿಒ ಮೇಲೆ ಎಸಿಬಿ ದಾಳಿ

ಬಿಳಕಿ ಗ್ರಾಮಪಂಚಾಯಿತಿ ಪಿಡಿಒ ಭ್ರಷ್ಟಾಚಾರ ನಿಗ್ರಹದಳದ (ACB) ಬಲೆಗೆ ಬಿದ್ದಿದ್ದಾನೆ. ಪಿಡಿಒ ಕೇಶವ ಮೂರ್ತಿ 70 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. ಇ-ಸ್ವತ್ತಿನಲ್ಲಿ ರಿಲೀಸಿಂಗ್ ಡೀಡ್ ಮಾಡಿಕೊಡಲು ಹರೀಶ್ ಎಂಬುವರ ಬಳಿ ಪಿಡಿಒ ಕೇಶವ ಮೂರ್ತಿ 1 ಲಕ್ಷ ರೂ ಹಣದ ಬೇಡಿಕೆ ಇಟ್ಟಿದ್ದನು.  ಈ ಕುರಿತು 5 ಸಾವಿರ ರೂ ಮುಂಗಡವಾಗಿ ಹಣ ಪಡೆದು ಉಳಿದ ಹಣ ಕೆಲಸ ಮುಗಿದ ಮೇಲೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಂದು ಶಿವಮೊಗ್ಗ…

Read More

ಮೇಕೆದಾಟು ಪಾದಯಾತ್ರೆಗೆ ಜಿಲ್ಲೆಯಿಂದ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ : ಹೆಚ್ ಎಸ್ ಸುಂದರೇಶ್

ಶಿವಮೊಗ್ಗ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಜ.19 ರಂದು ಶಿವಮೊಗ್ಗ ಜಿಲ್ಲೆಯಿಂದ ಸುಮಾರು 2000 ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಜಾರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಜ.19ರಂದು ಬೆಳಿಗ್ಗೆ 8.30ಕ್ಕೆ ಶಿವಮೊಗ್ಗ ಜಿಲ್ಲೆಯವರು ಕೆಪಿಸಿಸಿ ಕಚೇರಿ ಬಳಿ ಹಾಜರಿರುವಂತೆ ವರಿಷ್ಠರು ಸೂಚನೆ…

Read More

ಅಪ್ರಾಪ್ತೆಯ ಮೇಲೆ ಅತ್ಯಾಚಾರ : ಆರೋಪಿ ಬಂಧನ

ಶಿವಮೊಗ್ಗ : ಶಾಲೆಗೆ ಹೊರಟ್ಟಿದ್ದ ವಿದ್ಯಾರ್ಥಿ ಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರವೆಸಗಿರುವ‌ ಘಟನೆ‌ ವರದಿಯಾಗಿದೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಂದೂರು ಗ್ರಾಮದಲ್ಲಿನ ಹಳ್ಳಿಮನೆ  ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ 15 ವರ್ಷದ ಮಗಳನ್ನು ಅದೇ ಹೋಟೆಲ್ ನಲ್ಲಿ ಸಪ್ಲೈರ್ ಆಗಿ ಕೆಲಸ ಮಾಡುತ್ತಿದ್ದ ನಿದಿಗೆ ಗ್ರಾಮದ ಉಮೇಶ್, ( 28), ಬಾಲಕಿಯನ್ನು  ಪರಿಚಯಮಾಡಿಕೊಂಡು ತುಂಬಾ ಸಲುಗೆಯಿಂದ ಮಾತನಾಡುತ್ತಿದ್ದನು. ನಿನ್ನೆ ಬಾಲಕಿ ಶಾಲೆಗೆ ಹೋಗಲು ಹೊರಟಿದ್ದಾಗ ಬಾರಂದೂರಿನಿಂದ ತರೀಕೆರೆಗೆ ಹೋಗುವ ಬಸ್…

Read More

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೆ ಕೊರೊನಾ ಸೋಂಕು ಧೃಡ :

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಸೋಂಕು ದೃಢಪಡಿಸಿದ್ದಾರೆ. ಮೂರನೇ ಅಲೆಯ ಹೊಸ್ತಿಲಿನಲ್ಲಿರುವ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಈ ವೇಳೆ ಸಿಎಂ ಬೊಮ್ಮಾಯಿ ಸಣ್ಣಪ್ರಮಾಣದ ಲಕ್ಷಣ ಕಾಣಿಸಿಕೊಂಡ ಬೆನ್ನಲ್ಲಿ ಕೊರೋನ‌ ಪರೀಕ್ಷೆಗೆ ಒಳಪಟ್ಟಿದ್ದು, ಸೋಂಕು ದೃಢಪಟ್ಟಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಕೊರೋನ‌ ಪಾಸಿಟಿವ್ ಕಾಣಿಸಿಕೊಂಡ ಬೆನ್ನಲ್ಲಿ ನಾನು ಹೋಂ‌ಕ್ಯಾರಂಟೈನ್ ಆಗಿರುವುದಾಗಿ ತಿಳಿಸಿರುವ ಸಿಎಂ ನನ್ನೊಂದಿಗೆ ಸಂಪರ್ಕದಲ್ಲಿರುವವರು ಪರೀಕ್ಷೆಗೆ ಒಳಪಡುವಂತೆ ಹಾಗೂ ಐಸೋಲೇಷನ್…

Read More

ರಿಪ್ಪನ್ ಪೇಟೆ : ಐಟಿಐ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸುವಂತೆ ಬಿ ಪಿ ರಾಮಚಂದ್ರ ಆಗ್ರಹ

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಕೆದಲುಗುಡ್ಡ ಗ್ರಾಮದಲ್ಲಿ ನೂತನ ಸರಕಾರಿ ಐಟಿಐ ಕಾಲೇಜು ಕಟ್ಟಡ ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಉದ್ಘಾಟನೆ ಭಾಗ್ಯ ಕಾಣದೆ ಐಟಿಐ ವಿದ್ಯಾರ್ಥಿಗಳು ಪರಿತಪಿಸುತಿದ್ದಾರೆ, ಆದಷ್ಟು ಬೇಗ ನೂತನ ಕಟ್ಟಡ ಉದ್ಘಾಟನೆ ಮಾಡಿ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲಕರ ಮಾಡಿಕೊಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಆಗ್ರಹಿಸಿದ್ದಾರೆ.  ಇಂದು ಕೆದಲುಗುಡ್ಡೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಐಟಿಐ ಕಾಲೇಜಿನ ಕಟ್ಟಡವನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ  ಸುಮಾರು…

Read More

ಆರಗ ಜ್ಞಾನೇಂದ್ರ ಅವರಿಗೆ ತಾಕತ್ತಿದ್ದರೆ, ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ : ಕಿಮ್ಮನೆ ಸವಾಲು

ಶಿವಮೊಗ್ಗ : ದೇಶದ ಗೃಹಮಂತ್ರಿ ಅಮಿತ್ ಶಾ ಹಾಗೂ ರಾಜ್ಯದ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ತಾಕತ್ತಿದ್ದರೆ, ಸಾಮರ್ಥ್ಯ ಇದ್ದರೆ ನಂದಿತಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ. ಆರು ತಿಂಗಳಲ್ಲಿ ಫಲಿತಾಂಶ ಕೊಡಿ. ಇದರಲ್ಲಿ ನನ್ನ ಹಸ್ತಕ್ಷೇಪವೆಗಿರುವುದು ಗುಲಗಂಜಿಯಷ್ಟು ಸಾಬೀತಾದರೆ ನಾನು ಸಾರ್ವಜನಿಕ ಕ್ಷೇತ್ರದಿಂದ ನಿವೃತ್ತಿಯಾಗುತ್ತೇನೆ. ಇಲ್ಲದಿರೆ ರಾಜ್ಯದ ಗೃಹಮಂತ್ರಿಗಳು ತೀರ್ಥಹಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು. ಅವರಿಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ 01-11-2014 ರಿಂದ 2018 ರವರೆಗೆ ಸತತವಾಗಿ ಆರಗ ಜ್ಞಾನೇಂದ್ರ…

Read More

ಕೋವಿಡ್ ಬೂಸ್ಟರ್ ಡೋಸ್ ಲಸಿಕಾಕರಣ :: ಸಚಿವ ಈಶ್ವರಪ್ಪ ಚಾಲನೆ

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ(ಸಿಮ್ಸ್) ನಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಇವರು ಕೋವಿಡ್-19 ಮುನ್ನೆಚ್ಚರಿಕೆ(ಬೂಸ್ಟರ್)ಡೋಸ್ ಲಸಿಕಾಕರಣಕ್ಕೆ ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ, ಭಾರತ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಜ.10 ರಿಂದ ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ(ಕೋಮಾರ್ಬಿಡಿಟಿ) ಹೊಂದಿರುವ ಫಲಾನುಭವಿಗಳಿಗೆ ಕೋವಿಡ್ 19 ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತಿದ್ದು ಎಲ್ಲ ಅರ್ಹರು ಈ ಬೂಸ್ಟರ್ ಡೋಸ್ ಪಡೆಯಬೇಕೆಂದು ಕರೆ ನೀಡಿದರು….

Read More

ಅನಾಮಧೇಯ ಶವ: ವಾರಸುದಾರರ ಪತ್ತೆಗೆ ಮನವಿ

ಶಿವಮೊಗ್ಗ : ಜ.08 ರಂದು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅನಾಮಧೇಯ ವೃದ್ದರೋರ್ವರು ಮರಣ ಹೊಂದಿದ್ದಾರೆ.      ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಲಾಗಿದ್ದ ಸುಮಾರು 60 ರಿಂದ 65 ವರ್ಷದ ಅನಾಮಧೇಯ ವೃದ್ದರು ಮೃತಪಟ್ಟಿದ್ದು ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಮೃತರು ಸುಮಾರು 5.6 ಅಡಿ ಎತ್ತರ ಇದ್ದು ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು, 01 ಇಂಚು ಉದ್ದದ ಬಿಳಿ ಗಡ್ಡ ಮೀಸೆ ಇರುತ್ತದೆ. ಮುಂಭಾಗದ…

Read More
Exit mobile version