January 11, 2026

ಬಟ್ಟೆಮಲ್ಲಪ ಕರವೇ ವತಿಯಿಂದ ರಿಪ್ಪನ್ ಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ ನಾಮಫಲಕಕ್ಕೆ ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ :

 

ಕರ್ನಾಟಕ ರಕ್ಷಣಾ ವೇದಿಕೆ ಬಟ್ಟೆಮಲ್ಲಪ್ಪ ಘಟಕದಿಂದ ರಿಪ್ಪನ್ ಪೇಟೆ ಕುಕ್ಕಳಲೆ ಸಂಪರ್ಕ ರಸ್ತೆಗೆ ಅಳವಡಿಸಿದ್ದ ಕನ್ನಡದ ಮೇರು ನಟ ಪುನೀತ್ ರಾಜಕುಮಾರ ನಾಮಫಲಕಕ್ಕೆ ಮಸಿ ಬಳಿದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಶಾಂತಿಯುತ ಹೋರಾಟವನ್ನು ನಡೆಸಲಾಯಿತು.
ಪುನೀತ್ ನಾಮಫ಼ಲಕಕ್ಕೆ  ಬಣ್ಣ ಬಳಿದ ಕಿಡಿಗೇಡಿಗಳನ್ನು ಬಂಧಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಈ ಸಂಧರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಹೆಚ್ ಆರ್ ರಾಘವೇಂದ್ರ. ಘಟಕದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಮಂಜುನಾಥ್ ಬ್ಯಾಣದ್, ಅಶೋಕ್ ಕೆಪಿ, ದಿನೇಶ್ ಕಿರಣ್, ಡಿಸೋಜ ಶೇಖರ್, ಕುಲಾಲ್ ರಾಘವೇಂದ್ರ, ಸುಕೇಶ್, ಗೋಪಿ ಹರತಾಳು, ಅನುಪ್ ಮತ್ತಿತರು ಭಾಗವಹಿಸಿದ್ದರು

About The Author

Leave a Reply

Your email address will not be published. Required fields are marked *

Exit mobile version