Headlines

ಸಾಗರ : ಶಾಹಿ ಗಾರ್ಮೆಂಟ್ಸ್ ಗೆ ಜನ ಕರೆದೊಯ್ಯುತ್ತಿದ್ದ ಕಾರು ಅಪಘಾತ : ಚಾಲಕ ಸಾವು

ಸಾಗರ : ಇಲ್ಲಿನ ಸಮೀಪದ ಕೆಳದಿಪುರದಲ್ಲಿ ಮಾರುತಿ ಓಮಿನಿ ಕಾರಿನ ಬ್ರೇಕ್ ಫೇಲ್ಯೂರ್ ಆಗಿ ಮರವೊಂದಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತಪಟ್ಟ ಚಾಲಕನನ್ನು ಸುರೇಶ್(48) ಎಂದು ಗುರುತಿಸಲಾಗಿದೆ.
ಶಾಹಿ ಗಾರ್ಮೆಟ್ಸ್ ಗೆ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮಾರುತಿ ಓಮಿನಿ ದಿಡೀರ್ ಬ್ರೇಕ್ ಫೇಲ್ಯೂರ್ ಆಗಿದ್ದರಿಂದ ಈ ಅಪಘಾತ ಸಂಭವಿಸಿ ಚಾಲಕ ಮೃತಪಟ್ಟಿದ್ದಾನೆ.

ಕಾರಿನಲ್ಲಿದ್ದ 5 ಜನ ಮಹಿಳೆಯರು ಹಾಗೂ ಬಸ್ಸಿಗಾಗಿ ಕಾಯುತ್ತಿದ್ದ ಐವರಿಗೆ ಗಾಯವಾಗಿದೆ.ಗಂಭೀರ ಗಾಯಗೊಂಡ ಓರ್ವ ಯುವತಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಇನ್ನುಳಿದ ಗಾಯಾಳುಗಳಿಗೆ ಸಾಗರದ ಉಪವಿಭಾಗೀಯ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಾಗರ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು.

 ಹಾಲಿ ಮಾಜಿ ಶಾಸಕರ ಭೇಟಿ,::


ಸುದ್ದಿ ತಿಳಿದು ಶಾಸಕ ಹಾಲಪ್ಪ,ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

About The Author

Leave a Reply

Your email address will not be published. Required fields are marked *

Exit mobile version