Headlines

ಅವಿದ್ಯಾವಂತರು ದೇಶಕ್ಕೆ ಹೊರೆ ಎಂಬ ಅಮಿತ್ ಶಾ ಹೇಳಿಕೆಗೆ ಖಂಡನೆ:

ರಿಪ್ಪನ್ ಪೇಟೆ: ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆಯಾಗುತ್ತಾರೆ. ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ಎಂಬ ಗೃಹ ಸಚಿವ ಅಮಿತ್‌ ಶಾ ಹೇಳಿಕೆಯನ್ನು ಜೆಡಿಎಸ್ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ಖಂಡಿಸಿದ್ದಾರೆ.

ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸದ್‌ ಟಿವಿಗೆ ಅಮಿತ್‌ ಶಾ ಸಂದರ್ಶನದ ವೇಳೆ ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಥವಾ ಆತನಿಗೆ ಮಾಡಬೇಕಾದ ಕರ್ತವ್ಯಗಳು ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿಯು ಉತ್ತಮ ಪ್ರಜೆ ಹೇಗೆ ಆಗುತ್ತಾನೆ ಎಂದಿದ್ದರು.

ಈ  ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇಂತಹ ಹೇಳಿಕೆ ದೇಶದಲ್ಲಿ ಇರುವ ಅನಕ್ಷರಸ್ತರಿಗೆ ಮಾಡಿದ ಅಗೌರವವಾಗಿದೆ.ಇದೊಂದು ಸಂಪೂರ್ಣವಾದ ಬೇಜವಾಬ್ದಾರಿ ಹೇಳಿಕೆ,ಒಬ್ಬ ದೇಶದ ಗೃಹ ಮಂತ್ರಿಯಾಗಿ ಇಂತಹ ಕೀಳುಮಟ್ಟದ ಹೇಳಿಕೆ ನೀಡಬಾರದು.ಸುಮಾರು 40 ವರ್ಷಗಳ ಹಿಂದೆ ಜನಜೀವನ ಹೇಗಿತ್ತು ಎನ್ನುವುದನ್ನು ಅವರು ತಿಳಿದುಕೊಳ್ಳುವುದು ಸೂಕ್ತ ಹಾಗೇಯೆ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿ ದೇವರಾಜ್ ಅರಸ್ ರವರು ರೈತರು ಹಾಗೂ ಅನಕ್ಷರಸ್ಥರು ಈ ದೇಶದ ಜೀವನಾಡಿ ಎಂದಿದ್ದರು.

ಹಿಂದಿನ ಕಾಲದಲ್ಲಿ ಜನ ಜೀವನ ನಡೆಸುವುದೇ ಕಷ್ಟಕರವಾಗಿತ್ತು ಅಂತಹ ಸಂಧರ್ಭದಲ್ಲಿ ವಿಧ್ಯಾಭ್ಯಾಸ ಕೈಗೆಟುವ ಹಾಗೆ ಇರಲಿಲ್ಲ. ಚರಿತ್ರೆಯನ್ನು ತಿಳಿದು ಮಾತನಾಡಬೇಕಾಗಿರುವ ದೇಶದ ಗೃಹ ಸಚಿವರು ಸಾರಾಸಗಟಾಗಿ ದೇಶದ ಅವಿದ್ಯಾವಂತರನ್ನು ದೇಶಕ್ಕೆ ಹೊರೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ದೇಶದ ಪ್ರಸ್ತುತ ಸಮಸ್ಯೆಗಳಾದ ಬೆಲೆ ಏರಿಕೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಈ ತರಹ ಬೇಜವಬ್ದಾರಿ ಹೇಳಿಕೆ ನೀಡುತ್ತಲೇ ಕಾಲಾಹರಣ ಮಾಡುತ್ತಿದ್ದಾರೆ ಎಂದು ಈ ಸಂಧರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Exit mobile version