ಶಿವಮೊಗ್ಗ: ನಗರದ ಟಿಪ್ಪುನಗರ ವಾಸಿಯಾದ ಟ್ವಿಸ್ಟ್ ಇಮ್ರಾನ್ ಎಂಬ ಯುವಕನ ಬರ್ಬರ ಹತ್ಯೆಯಾಗಿದೆ. ರಾತ್ರಿ 9-15 ರ ಸುಮಾರಿನಲ್ಲಿ ಕೆ.ಕೆ.ಶೆಡ್ ನ ಬಳಿ ಈ ಘಟನೆ ನಡೆದಿದೆ.
ಕೊಲೆಯಾದ ಟ್ವಿಸ್ಟ್ ಇಮ್ರಾನ್ ನ ಶವ ಚರಂಡಿಯಲ್ಲಿ ದೊರಕಿದ್ದು ದೇಹದ ಎಡಭಾಗದ ಅಲ್ಲಲ್ಲಿ ಚೂರಿಯಿಂದ ಇರಿದ ಗಾಯಗಳೊಂದಿಗೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಆರೋಪಿಗಳ ಜಾಡು ಹಿಡಿದು ಬಲೆ ಬೀಸಿದ್ದಾರೆ. ಶವವನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಗಾಂಜಾ ಘಾಟು ಗಾಂಜಾ ಪೆಡ್ಲರ್ ನನ್ನ ಬಲಿ ತೆಗೆದುಕೊಂಡಿದೆ. ಗಾಂಜಾ ಪೆಡ್ಲರ್ ಒಬ್ಬನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕೊಲೆಗೆ ಗಾಂಜಾ ಗಲಾಟೆಯೇ ಕಾರಣವೆಂದು ಹೇಳಲಾಗುತ್ತಿದೆ.
ಟಿಪ್ಪುನಗರದ 7 ನೇ ತಿರುವು ಮತ್ತು 4ನೇ ತಿರುವು ಸೇರುವ ಕೆಕೆ ಶೆಡ್ ನಲ್ಲಿ ಇರ್ಫಾನ್ ಯಾನೆ ಟ್ವಿಸ್ಟ್ ನನ್ನ ಲತೀಫ್ ಗ್ಯಾಂಗ್ ಚಾಕುವಿನಿಂದ ತಿರುವಿ ಕೊಲೆ ಮಾಡಿ ಪರಾರಿಯಾಗಿರುವುದು ತಿಳಿದುಬಂದಿದೆ.
ಗಾಂಜಾ ಅಮಲು ನಿಧಾನವಾಗಿ ಶಿವಮೊಗ್ಗದಲ್ಲಿ ವ್ಯಾಪಿಸಿಕೊಂಡಿದೆ. ಈ ಗಾಂಜಾವನ್ನ ಕೆಳಮಟ್ಟದಲ್ಲಿ ಮಾರುವ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ. ಇರ್ಫಾನ್ ಗಾಂಜಾ ಪೆಡ್ಲರ್ ಎಂದು ಹೇಳಲಾಗುತ್ತಿದೆ.
ಇರ್ಫನ್ ಮತ್ತು ಲತೀಫ್ ಗ್ಯಾಂಗ್ ಹುಡುಗರ ನಡುವೆ ಗಲಾಟೆ ಆಗಿದೆ ಎಂದು ಹೇಳಲಾದರೂ ಹುಡುಗರನ್ನ ಮಾತಾಡಿಸಿಕೊಂಡು ಬರಲು ಕೆಕೆ ಶೆಡ್ ಗೆ ಬಂದ ವೇಳೆ ಲತೀಫ್ ಗ್ಯಾಂಗ್ ಅಲ್ಲೇ ಇತ್ತು ಎನ್ನಾಗಿದೆ.
ನಾನು ಸುಲ್ತಾನ್ ನೀನು ಸುಲ್ತಾನ್ ಎಂಬ ವಿಷಯದಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ. ಈ ಕಿರಿಕ್ ನ ಹಿನ್ನಲೆಯಲ್ಲಿ ಕೊಲೆಯಾಗಿದೆ ಎನ್ನಲಾಗಿದೆ. ಆದರೂ ಹೆಚ್ಚಿನ ಮಾಹಿತಿ ಇನ್ನೂ ಕಲೆ ಹಾಕಬೇಕಿದೆ.
ಇರ್ಫಾನ್ ಯಾನೆ ಟ್ವಿಸ್ಟ್ ಈತ ದೊಡ್ಡಪೇಟೆ ಪೊಲೀಸ್ ಠಾಣೆಯ ಮಿಳಘಟ್ಟದ 2 ನೇ ತಿರುವಿನ ನಿವಾಸಿಯಾಗಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್