ಕೋಣಂದೂರಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ನಿಧನ :
ಕೋಣಂದೂರು : ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್ ಮೂರ್ತಿ ರವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಇಂದು ಕಾರ್ಯನಿಮಿತ್ತ ಕಾರ್ ನಲ್ಲಿ ಶಿವಮೊಗ್ಗಕ್ಕೆ ತೆರಳಿ ವಾಪಾಸ್ ಗರ್ತಿಕೆರೆಯ ನಿವಾಸಕ್ಕೆ ಹಿಂದಿರುಗುವಾಗ ಆಯನೂರ್ ಬಳಿ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಕಾರಿನ ಚಾಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಅಷ್ಟರಲ್ಲೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ.ಮೃತದೇಹವನ್ನು ಆಂಬುಲೆನ್ಸ್ ಮೂಲಕ ಗರ್ತಿಕೆರೆಯ ಸ್ವ ಗೃಹಕ್ಕೆ ತರಲಾಗುತ್ತಿದೆ.
ಕೋಣಂದೂರು ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿ ಮೂಡಿಸಿದ್ದ ಗಣೇಶ್ ಮೂರ್ತಿಯವರ ಅಗಲಿಕೆ ಅವರ ಅಸಂಖ್ಯಾತ ಶಿಷ್ಯ ವೃಂದಕ್ಕೆ ನೋವು ತರಿಸಿದೆ.ಇವರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿ ಪ್ರಸ್ತುತ ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾಗಿಕಾರ್ಯನಿರ್ವಹಿಸುತ್ತಿದ್ದರು. ಅವರು ಒಲ್ಲದ ಮನಸ್ಸಿನಿಂದಲೇ ನೆಚ್ಚಿನ ವಿದ್ಯಾ ದೇಗುಲಕ್ಕೆ ಬೆನ್ನು ಮಾಡಿ ಅಸಂಖ್ಯಾತ ವಿದ್ಯಾರ್ಥಿಗಳು,ಬಂಧು ಬಳಗ ಹಾಗೂ ಹಿತೈಷಿಗಳನ್ನು ಬಿಟ್ಟು ಸಾವಿನೆಡೆಗೆ ಹೆಜ್ಜೆ ಹಾಕಿದ್ದಾರೆ.
ಕೋಣಂದೂರಿನ ಶಿಕ್ಷಣ ಕ್ರಾಂತಿಯ ಹರಿಕಾರನ ಮೃತ್ಯು ಕೋಣಂದೂರಿನ ಜನತೆಗೆ ಅಘಾತವುಂಟು ಮಾಡಿದೆ.
