ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು :ಮಳಲಿ ಶ್ರೀ
ರಿಪ್ಪನ್ ಪೇಟೆ:ನಾನು ನನ್ನದು ಎಂಬುದಕ್ಕಿಂತ ನಾವು ನಮ್ಮದು ಎಂಬ ಮನೋಭಾವ ಇದ್ದಾಗ ಮಾತ್ರ ಬೆಳೆಯಲಿಕ್ಕೆ ಸಾದ್ಯ ಎಂದು ಮಳಲಿಮಠದ .ಡಾ.ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಬುಧವಾರ ಹೊಸನಗರ ತಾಲೂಕಿನ ಮಸರೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ. ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ. ವಿಶೇಷ ರುದ್ರಾಭಿಷೇಕ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಅವರು . ಮನುಷ್ಯ ಸಮಾಜಮುಖಿಯಾಗಿ ಯೋಚಿಸಿ ಬದುಕಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು. ನಾನು ನನ್ನಿಂದಲೆ ಎಂಬ ಅಹಂಕಾರವನ್ನು ಬಿಡಬೇಕು ಎಂದರು….