January 11, 2026

ಶಿವಮೊಗ್ಗ: ನೂತನ ಸುದ್ದಿವಾಹಿನಿ ಟಿವಿ12 ಕನ್ನಡ ರಾಜ್ಯಾದ್ಯಂತ ಏಕಕಾಲದಲ್ಲಿ ಲೋಕಾರ್ಪಣೆ

ಶಿವಮೊಗ್ಗ: 75ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ TV12 ಕನ್ನಡ ಸುದ್ದಿವಾಹಿನಿಯ “ಲೋಗೋ” ವನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ರವರು ಜ್ಯೋತಿ ಬೆಳಗಿಸುವುದರ ಮೂಲಕ ಲೋಕಾರ್ಪಣೆ ಮಾಡಿದರು.

ನಗರದ ಮಥುರಾ ಸೆಂಟ್ರಲ್ ಸಭಾಂಗಣದಲ್ಲಿ ನಡೆದ ಟಿವಿ೧೨ ಕನ್ನಡ ಸುದ್ದಿ ವಾಹಿನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ರವರು ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ಹಾಗೂ ಪತ್ರೀಕಾರಂಗದ ಕ್ಷೇತ್ರವು ನಮ್ಮ ಸಾಮಾಜಿಕ ಕ್ಷೇತ್ರದ ಮೇಲೆ ಬಹಳಷ್ಟು ಪರಿಣಾಮ ಬೀರುವ ಕಾಲವಿದು.ವಿವಿಧ ಕ್ಷೇತ್ರಗಳ ಸುದ್ದಿಗಳನ್ನು ತತ್ ಕ್ಷಣವೇ ಎಲೆಕ್ಟ್ರಾನಿಕ್ ಮಾದ್ಯಮದ ಮೂಲಕ ಪಡೆಯಲು ಸಾಧ್ಯವಾಗಿದೆ.ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹೊಸ ರೀತಿಯ ಪ್ರಯತ್ನವನ್ನು ಕ್ರೀಯಾಶೀಲವಾಗಿ ಮಾಡುವ ಮೂಲಕ ನಿಮ್ಮ ಮಾಧ್ಯಮ ಜನರಿಗೆ ತಲುಪಲಿ,ಸಮಾಜದ ಪರಿವರ್ತನೆ ಆಗಲಿ ಎಂದು ಶುಭ ಹಾರೈಸಿದರು.

ಟಿವಿ12 ” ಲೋಗೋ” ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮತ್ತೊರ್ವ ಅತಿಥಿ ಆರಕ್ಷಕ ನಿರೀಕ್ಷಕರಾದ ಸತೀಶ್ ನಾಯ್ಕ್ ರವರು ಮಾತನಾಡಿ ಹೊಸ ವಾಹಿನಿ ಕನ್ನಡಿಗರ ಮನಸ್ಸನ್ನು ಗೆಲ್ಲುವ ಮೂಲಕ ಧೃಡವಾದ ಹೆಜ್ಜೆ ಇಡುವ ಹಾದಿಯಲ್ಲಿ ಸಾಗಲಿ,ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಈ ಚಾನಲ್ ಮಾಡಲಿ ಎಂಬ ಮಹತ್ತರ ಆಶಯದೊಂದಿಗೆ ಶುಭ ಹಾರೈಸುತ್ತಿದ್ದೇನೆ ಎಂದರು.

ಟಿವಿ12 ಕನ್ನಡ ಸುದ್ದಿವಾಹಿನಿಯ ಶಿವಮೊಗ್ಗ ಜಿಲ್ಲಾ ಮುಖ್ಯ ವರದಿಗಾರರಾದ ರಫ಼ಿ ರಿಪ್ಪನ್ ಪೇಟೆ ಮಾತನಾಡಿ ಇತಿಹಾಸದಲ್ಲೆ ಪ್ರಥಮ ಬಾರಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಟಿವಿ12 ಕನ್ನಡ ಸುದ್ದಿವಾಹಿನಿಯು ಲೋಕಾರ್ಪಣೆ ಆಗುತ್ತಿದ್ದು,ರಾಜ್ಯಾದ್ಯಂತ ಎಲ್ಲಾ ತಾಲೂಕಿನಲ್ಲಿಯು ವರದಿಗಾರರನ್ನು ಹೊಂದಿರುವ ಏಕೈಕ ವಾಹಿನಿ ಇದಾಗಿದೆ.ಮುಂದಿನ ದಿನಗಳಲ್ಲಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾದ ಎಂ ಡಿ ಚನ್ನಕೇಶವ್ ರವರ ಮಾರ್ಗದರ್ಶನದಲ್ಲಿ ಕನ್ನಡಿಗರ ಮನಸ್ಸನ್ನು ಗೆಲ್ಲುವಂತೆ ನಮ್ಮ ತಂಡ ಕಾರ್ಯನಿರ್ವಹಿಸುತ್ತದೆ ಎಂದರು.

ಈ ಸಂಧರ್ಭದಲ್ಲಿ ಹೊಸ ಚಿಗುರು ಸೇವಾ ಸಂಸ್ಥೆ ಮುಖ್ಯಸ್ಥರಾದ ಕೆ ಮುರುಗನ್,ಟಿವಿ12 ಜಿಲ್ಲಾ ಸಂಯೋಜಕರಾದ ವಿಜಯ್ ಗೌಳಿ,ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥರಾದ ಸೌಗಂಧಿಕ,ಸೂಡೂರು ಶಿವು ಹಾಗೂ ಟಿವಿ12 ತಾಲೂಕ್ ವರದಿಗಾರರುಗಳಾದ ನಾಗಕಿರಣ್ ಶೆಟ್ಟಿ, ಧರ್ಮರಾಜ್,ಪ್ರಶಾಂತ್ ಮೇಗರವಳ್ಳಿ,ವೆಂಕಟೇಶ್ ಸೊರಬ,ಹಾಗೂ ಈಶ್ವರ್ ಭದ್ರಾವತಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *

Exit mobile version